ಕರ್ನಾಟಕ

“ಬಿಜೆಪಿ ಗೆಲ್ಲಿಸಲು ಆರೆಸ್ಸೆಸ್‌ ಹುನ್ನಾರ’

Pinterest LinkedIn Tumblr

bjpಬಾಗಲಕೋಟೆ: ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಹಾಗೂ ಆರ್‌ಎಸ್‌ಎಸ್‌ನವರು ಪ್ರಚೋದನಕಾರಿ ಭಾಷಣ ಮಾಡಿ, ಬಿಜೆಪಿಗೆ ಮತ ಹಾಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್‌ ದೂರಿದರು.

ನಗರದಲ್ಲಿ ನಡೆದ ಅಂಬೇಡ್ಕರ ಅವರ 125ನೇ ಜನ್ಮ ವರ್ಷಾಚರಣೆ ಹಾಗೂ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶಭಕ್ತಿ ಹೆಸರಿನಲ್ಲಿ ರಾಜಕೀಯ ಮಾಡುವವರು ಮಾತು-ಕೃತಿಗೂ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾರೆ.

ಹಿಂದೂ ಸಂಘಟನೆಗಳು ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ದಲಿತರು, ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸುತ್ತಾರೆ. ಆರ್‌ಎಸ್‌ಎಸ್‌ ಅಥವಾ ಬಜರಂಗ ದಳ ಪ್ರೈವೇಟ್‌ ಆರ್ಮಿ ಅಲ್ಲ ಎಂದು ತಿಳಿಸಿದರು.

-ಉದಯವಾಣಿ

Comments are closed.