ಬೆಂಗಳೂರು,ಆ.೧೩-ಬಾರ್‌ವೊಂದರಲ್ಲಿ ಜಾಲಿ ಮಾಡಲು ಹೋದ ಯುವಕರ ಯುವತಿಯರ ಎರಡು ಗುಂಪುಗಳ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಮಾರಾಮಾರಿ ನಡೆದು ಪ್ರಕರಣ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಳೆದ ಆ.೬ರಂದು ರಾತ್ರಿ ಕಬ್ಬನ್‌ಪಾರ್ಕ್‌ನ ಸಿಟಿ ಬಾರ್‌ಗೆ ಏಳು ಮಂದಿ ಯುವತಿಯರ ಗುಂಪಿನೊಂದಿಗೆ ರಾಹುಲ್ ಶಿಫಾನಿ ಹಾಗೂ ಆತನ ಸ್ನೇಹಿತ ಬಂದು ಮೋಜು ಮಾಡುತ್ತಿದ್ದರು.
ಇದೇ ವೇಲೆ ಅಲ್ಲಿಗೆ ಯದ್ಯಮಿಯೊಬ್ಬರ ಮಗ ಸಿದ್ದಾಂತ್ ವಿರ್ವಾನಿ ಯುವಕರ ಜೊತೆ ಬಂದು ಯುವತಿಯರ ಕುಳಿತಿದ್ದ ಸ್ಥಳದಲ್ಲೇ ಮದ್ಯಪಾನ ಮೋಜು ಮಾಡುತ್ತಾ ಅಮಲಿನಲ್ಲಿ ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಾ ಅಪ್ಪಿಕೊಳ್ಳಲು ಮುಂದಾದರು.
ಯುವತಿಯರ ಗುಂಪಿನಲ್ಲಿದ್ದ ರಾಹುಲ್ ಶಿಫಾನಿ ಸಿದ್ದಾಂತ್ ವಿರ್ವಾನಿ ಗುಂಪಿನ ವಿರುದ ತಿರುಗಿ ಬಿದ್ದು ಜಗಳ ಮಾಡಿದ್ದಾನೆ. ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ ರೂಪ(ಹೆಸರುಬದಲಿಸಲಾಗಿದೆ)ಜೊತೆಗಿದ್ದ ಯುವಕನೊಬ್ಬ ಬಿಯರ್ ಬಾಟಲಿಯಿಂದ ಹೊಡೆದು ಗಾಯಗೊಳಿಸಿದ್ದಾನೆ ಮರುದಿನ ಎಂದು ಸಿದ್ದಾಂತ್ ವಿರ್ವಾನಿ ಕಬ್ಬನ್‌ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ಆಧರಿಸಿ ರಾಹುಲ್ ಶಿಫಾನಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು ಇದಾದ ನಾಲ್ಕು ದಿನಗಳ ನಂತರ ರಾಹುಲ್ ಶಿಫಾನಿ ಜೊತೆಗಿದ್ದ ರೂಪ ಪೊಲೀಸರಿಗೆ ದೂರು ನೀಡಿ ಮದ್ಯದ ಅಮಲಿನಲ್ಲಿದ್ದ ಸಿದ್ದಾಂತ್ ನಮ್ಮ ಜೊತೆ ಅಸಭ್ಯವಾಗಿ ವರ್ತಿಸ ಅಪ್ಪಿಕೊಳ್ಳಲು ತೊಡಗಿದರು.
ನಮ್ಮ ಜೊತೆಗಿದ್ದ ರಾಹುಲ್ ರಕ್ಷಣೆಗೆ ಬಂದಿದ್ದು ಬಾರ್‌ನ ಬೌನ್ಸರ್‌ಗಳು ಸಿಬ್ಬಂದಿ ನಮ್ಮ ರಕ್ಷಣೆಗೆ ಬಂದರು ಕೂಡಲೇ ನಾವು ಬಾರ್‌ನಿಂದ ಹೊರಬಂದೆವು ಆದರೂ ರಾಹುಲ್ ಮೇಲೆ ಮೇಲೆ ಸುಳ್ಳು ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಎರಡು ಕಡೆಯವರು ನೀಡಿದ ದೂರು ದಾಖಲಿಸಿಕೊಳ್ಳಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ ಪ್ರತ್ಯಕ್ಷದರ್ಶಿಗಳು ಬಾರ್‌ನ ಸಿಬ್ಬಂದಿ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರವಲಯ ಡಿಸಿಪಿ ಸಂದೀಪ್ ಪಾಟೀಲ್ ಅವರು ತಿಳಿಸಿದ್ದಾರೆ
Comments are closed.