ಬೆಂಗಳೂರು,ಆ.೧೩-ವಿವಿಧ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ೮ ಮಂದಿ ದರೋಡೆಕೋರರನ್ನು ಡಾಬಸ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.
ಕಾವೇರಿ ನಗರದ ಪುನೀತ್, ಚರಣ, ಪರಿಮಳನಗರದ ಕಾರ್ತಿಕ, ಮಾಗಡಿ ತಾಲೂಕಿನ ಜಯಂತ್, ನಾಗೇಶ್, ರಮೇಶ್, ತುಮಕೂರಿನ ಶಶಿಕುಮಾರ್ ಬಂಧಿತ ಖದೀಮರು. ಬಂಧಿತರಿಂದ ೧೦ ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ಧ ನೆಲಮಂಗಲ ತಾಲೂಕಿನ ೯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೨೨ ಪ್ರಕರಣಗಳು ದಾಖಲಾಗಿದ್ದವು. ಕಳ್ಳತನ ನಡೆಸಿ ಒಂದು ವರ್ಷದಿಂದ ತಲೆ ಮರೆಸಿಕೊಂಡು ತಿರುಗುತ್ತಿದ್ದ ಈ ದರೋಡೆಕೋರರ ಗುಂಪು, ಶಿವಗಂಗೆ ರಸ್ತೆಯ ಶಾರದ ಕ್ರಾಸ್ ಬಳಿ ಸಂಚರಿಸುತ್ತಿದ್ದ ವಾಹನಗಳನ್ನು ಅಡ್ಡಗಟ್ಟಿ ಹಣ ದೋಚುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಡಾಬಸ್ ಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
Comments are closed.