ಕರ್ನಾಟಕ

ಇದು ಶಿಲೆಯಲ್ಲ, ಕಲೆಯ ದೇಗುಲ

Pinterest LinkedIn Tumblr

12krp3clrಕೆ.ಆರ್.ಪುರ, ಆ. ೧೨ – ಬಳಕೆಯಾಗದ ವಸ್ತುಗಳು ಹಾಗೂ ಥರ್ಮಾಕೋಲಿನಿಂದ ಕಲಾವಿದನ ಕೈಚಳಕದಲ್ಲಿ ಸುಂದರ ದೇವಾಲಯ ಅರಳಿದ್ದು, ವರಮಹಾಲಕ್ಷ್ಮಿ ಹಬ್ಬದ ಆಚರಣೆಗೆ ಮನೆಯ ಹೆಂಗಳೆಯರಿಗೆ ಅದ್ಬುತ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಬೇಲೂರು ಹಳೆಬೀಡಿನಲ್ಲಿರುವ ದೇವಾಲಯಗಳಂತೆಯೇ ಇದನ್ನು ಕೂಡಾ ನಿರ್ಮಿಸಲಾಗಿದ್ದು, ೬ಕಂಬಗಳು, ವೈವಿದ್ಯಮಯವಾದ ಶಿಲ್ಪಗಳ ಹಾಗೇ ಕಲ್ಲಿನಿಂದ ಶಿಲ್ಪಿಯೇ ಕೆತ್ತಿರುವ ಹಾಗೆ ನಿರ್ಮಿಸಲಾಗಿದೆ.

ಈ ಸುಂದರ ದೇವಾಲಯವನ್ನು ನಿರ್ಮಾಣ ಮಾಡಿರುವುದು ಮಹದೇವಪುರ ಕ್ಷೇತ್ರದ ವೈಟ್‌ಫೀಲ್ಡ್ ಬಳಿಯ ಚನ್ನಸಂದ್ರ ಗ್ರಾಮದ ನಿವಾಸಿ ಸಿ.ಎ.ಚಂದ್ರಶೇಖರ್‌ರವರು, ನಿಜಕ್ಕೂ ಇದು ಥರ್ಮಾಕೋಲಿನಿಂದ ಮಾಡಿದ್ದ ಎಂದು ಅಚ್ಚರಿಯಾಗುವುದು ಸಹಜ, ಆದರೆ ಇದು ಬಳಕೆಯಾಗದ ವಸ್ತುಗಳಿಂದ ಅರಳಿರುವ ಕಲಾಕೃತಿಯೇ, ಇದರ ನಿರ್ಮಾಣಕ್ಕೆ ಸರಿಸುಮಾರು ಒಂದು ವರ್ಷವೇ ಕಳೆದಿದೆ.

ಗೃಹ ನಿರ್ಮಾಣಕ್ಕೆಂದು ವಸ್ತುಗಳನ್ನು ಖರೀದಿಸಿದಾಗ ಅವುಗಳಲ್ಲಿ ಬರುವ ಥರ್ಮಾಕೋಲಿನಿಂದ ನಿರ್ಮಾಣ ಮಾಡಿರುವಂತದ್ದು, ತಮ್ಮ ಒತ್ತಡದ ಜೀವನದಲ್ಲೂ ಆಗಾಗ ಸಮಯವನ್ನು ಹೊಂದಿಸಿಕೊಂಡು ತಾವೇ ಖುದ್ದಾಗಿ ಹವ್ಯಾಸಕ್ಕೆಂದು ಮಾಡಹೋಗಿ ಈಗ ದೊಡ್ಡದಾದ ಸುಂದರ ಕಲಾಕೃತಿಯನ್ನು ನಿರ್ಮಿಸಿರುವುದಾಗಿ ಚಂದ್ರಶೇಖರ್ ತಿಳಿಸಿದ್ದಾರೆ.

ವರಮಹಾಲಕ್ಷ್ಮಿ ಹಬ್ಬ ಹೆಣ್ಣುಮಕ್ಕಳಿಗೆ ತುಂಬಾ ವಿಶಿಷ್ಟವಾದ ಹಬ್ಬ, ಪ್ರತಿ ವರ್ಷವೂ ಸಹ ಗಣೇಶ, ಶಿವರಾತ್ರಿ ಹಬ್ಬಗಳಿಗೆ ನಮ್ಮ ತಂದೆಯೇ ಸುಂದರ ಮಂಟಪಗಳನ್ನು ನಿರ್ಮಿಸಿ ಅವುಗಳಲ್ಲಿ ದೇವರ ಮೂರ್ತಿಗಳನ್ನು ಕೂರಿಸುತ್ತಿದ್ದುದು ವಾಡಿಕೆ.

ಅದರಂತೆ ಈ ಬಾರಿ ಸುಂದರವಾದ ದೇವಾಲಯವನ್ನು ನಿರ್ಮಿಸಿ ನಮಗೆ ಉಡುಗೊರೆಯಾಗಿ ನೀಡಿರುವುದು ನಿಜಕ್ಕೂ ಸಂತಸವನ್ನು ಉಂಟುಮಾಡಿದೆ ಎಂದು ಇಂದುಶ್ರೀ ಹರ್ಷವ್ಯಕ್ತಪಡಿಸಿದರು. ಹವ್ಯಾಸಕ್ಕೆಂದು ಮಾಡಿದ್ದು, ಯಾವುದೇ ಕಸುಬುದಾರರಿಗಿಂತಲೂ ಕಡಿಮೆ ಇಲ್ಲದಂತಿದೆ.

Comments are closed.