ಬೆಂಗಳೂರು: ರಾಜ್ಯದಲ್ಲಿ ಸಿದ್ಧಪಡಿಸಿದ ಆಹಾರಗಳ ಕ್ಯಾಂಟಿನ್ ತೆರೆದು, ಈ ಮೂಲಕ ನಿರ್ಗತಿಕರಿಗೆ ರಾತ್ರಿ ವೇಳೆ ಉಚಿತ ಊಟದ ವ್ಯವಸ್ಥೆ ಮಾಡಲು ಸರಕಾರ ಚಿಂತನೆ ನಡೆಸಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಿರ್ಗತಿಕರು ಹಸಿವಿನಿಂದ ಬಳಲಬಾರದೆಂಬ ಉದ್ದೇಶದಿಂದ ಸರಕಾರದಿಂದ ಊಚಿತ ಊಟ ನೀಡಲು ಮುಂದಾಗಿದ್ದೇವೆ. ಪ್ರಯೋಗಕ್ಕಾಗಿ ಬೆಂಗಳೂರು ನಗರ ಪಾಲಿಕೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಸ್ ನಿಲ್ದಾಣ, ರೈಲೈ ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಯಂ ಸೇವಾ ಸಂಘಗಳ ಮೂಲಕ ಆಹಾರ ಪೊರೈಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್‌ಗಳ ಗೊಂದಲ ನಿವಾರಣೆ ಮಾಡಲಿದ್ದೇವೆ. ರಾಜ್ಯದಲ್ಲಿ 6.50 ಲಕ್ಷ ನಕಲಿ ಕಾರ್ಡ್‌ಗಳನ್ನು ಪತ್ತೆ ಹಚ್ಚಿದ್ದು, ಇನ್ನು ಮುಂದೆ ನಕಲಿ ಕಾರ್ಡ್‌ಗಳ ಹಾವಳಿಗೆ ಕಡಿವಾಣಕ್ಕೆ ಆಧಾರ್ ಕಾರ್ಡ್ ರೀತಿಯ ರೇಷನ್ ಕಾರ್ಡ್‌ಗಳನ್ನು ನೀಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
Comments are closed.