ಮುಂಗಾರು ಮಳೆ-2 ಚಿತ್ರದ ಆಡಿಯೋ ಯಶಸ್ಸಿನಲ್ಲಿರುವ ಅರ್ಜುನ್ ಜನ್ಯ ಬಳಿ ಈಗ ಇರುವುದು ಎಲ್ಲವು ಬಹು ನಿರೀಕ್ಷಿತ ಯೋಜನೆಗಳೇ.
ದರ್ಶನ ಅಭಿನಯದ ಚಕ್ರವರ್ತಿ, ಸುದೀಪ್ ಅಭಿನಯದ ಹೆಬ್ಬುಲಿ ಜೊತೆಗೆ ಬಹುದೊಡ್ಡ ಯೋಜನೆಯಾದ ದಿ ವಿಲನ್ ಗೂ ಸಹ ಅರ್ಜುನ್ ಜನ್ಯ ಅವರೇ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದು ಆಗಸ್ಟ್ 12 ಕ್ಕೆ ಪ್ರಾರಂಭವಾಗಲಿದೆ.
ಆಟೋಗ್ರಾಫ್ ಪ್ಲೀಸ್ ಚಿತ್ರದ ಮೂಲಕ 2006 ರಲ್ಲಿ ಸ್ಯಾಂಡಲ್ ವುಡ್ ಗೆ ಪರಿಚಯರಾದ ಅರ್ಜುನ್ ಜನ್ಯ, ಕಳೆದ ಒಂದು ದಶಕದಲ್ಲಿ ಬಿರಿಗಾಲಿ, ಸಂಚಾರಿ, ಕೆಂಪೇಗೌಡ, ವರದನಾಯಕ, ವಿಕ್ಟರಿ ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅಭಿನಯದ ದಿ ವಿಲನ್ ಎಂಬ ಬಹುನಿರೀಕ್ಷಿತ ಚಿತ್ರಕ್ಕೂ ಅರ್ಜುನ್ ಜನ್ಯ ಅವರೇ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಬೇರೆ ಪಾತ್ರಗಳನ್ನು ಅಂತಿಮಗೊಳಿಸಲಾಗುತ್ತಿದ್ದು ತಮನ್ನಾ ಸಹ ಈ ಚಿತ್ರದ್ಲಲಿ ಅಭಿನಯಿಸಲಿದ್ದಾರೆ ಎಂಬ ನಿರೀಕ್ಷೆ ಇದೆ.
Comments are closed.