ಬೆಂಗಳೂರಿನಲ್ಲಿರುವವರ ಲೈಫ್ಸ್ಟೈಲ್ ವಿಭಿನ್ನ. ಫಿಟ್ ಆಗಿರಬೇಕು ಅನ್ನೋದು ಬಹಳಷ್ಟು ಮಂದಿಯ ಆಸೆ. ಈ ಆಸೆಗೆ ಹೆಣ್ಣು ಮಕ್ಕಳು ಅನ್ನೋ ಭೇದವಿಲ್ಲ. ಎಲ್ಲರದೂ ಒಂದೇ ಮನಸ್ಸು. ಅದರಲ್ಲೂ ಈಗೀಗ ಫಿಟ್‌ನೆಸ್‌ಗಾಗಿ ನೃತ್ಯಭ್ಯಾಸ ಮಾಡುವವರಿದ್ದಾರೆ. ಹಾಗೆ ಡಾನ್ಸ್ ಪ್ರೀತಿಯವರನ್ನು ಇತ್ತೀಚೆಗೆ ತುಂಬಾ ಆಕರ್ಷಿಸಿದ್ದು ಝುಂಬಾ ಡಾನ್ಸು. ಒಂದು ನೃತ್ಯ ಪ್ರಕಾರವಾಗಿಯೂ ಅದೇ ಥರ ಫಿಟ್‌ನೆಸ್ ಕಾಪಾಡಿಕೊಳ್ಳುವುದಕ್ಕೂ ಈ ಝುಂಬಾ ಜನಪ್ರೀತಿ ಗಳಿಸಿತು. ಈಗ ಝುಂಬಾದ ಮತ್ತೂಂದು ಅಪ್‌ಡೇಟೆಡ್ ವರ್ಷನ್ ಬಂದಿದೆ. ಅದರ ಹೆಸರು ಅಕ್ವಾ ಝುಂಬಾ.
ಏನಿದು ಅಕ್ವಾ ಝುಂಬಾ?
ಝುಂಬಾ ತುಂಬಾ ಜನಪ್ರಿಯವಾದ ನೃತ್ಯ ಪ್ರಕಾರ. ಇಂಟರೆಸ್ಟಿಂಗ್ ಅಂದ್ರೆ ನೃತ್ಯವಾಗಿಯೂ ಇದನ್ನು ಕಲಿಯುವವರು ಸಾಕಷ್ಟಿದ್ದಾರೆ. ಅದರಂತೆ ಫಿಟ್‌ನೆಸ್‌ಗಾಗಿ ಈ ನೃತ್ಯಾಭ್ಯಾಸ ಕಲಿಯುವವರೂ ಸಾಕಷ್ಟಿದ್ದಾರೆ. ಅಕ್ವಾ ಝುಂಬಾ ಅಂದ್ರೆ ನೀರಲ್ಲಿ ಝುಂಬಾ ನೃತ್ಯ ಅಭ್ಯಾಸ ಮಾಡುವುದು. ಬೆಂಗಳೂರಲ್ಲಿ ಈಗೀಗ ಅಕ್ವಾ ಏರೋಬಿಕ್ಸ್ ಮಾಡಿ ಜನ ಫಿಟ್‌ನೆಸ್ ಕಾಪಾಡಿಕೊಳ್ಳುತ್ತಿದ್ದಾರೆ. ಅದರಂತೆಯೇ ಅಕ್ವಾ ಝುಂಬಾಗೂ ಜನ ಮರುಳಾಗುತ್ತಿದ್ದಾರೆ.
ಅಂದಹಾಗೆ ಅಕ್ವಾ ಝುಂಬಾವನ್ನು ಫಿಟ್‌ನೆಸ್‌ಗಾಗಿ ಕಲಿಯುವರ ಸಂಖ್ಯೆ ಜಾಸ್ತಿ. ನೀರಲ್ಲಿ ನಡೆಯುವುದು ಸ್ವಲ್ಪ ತ್ರಾಸದಾಯಕ. ಅದರಲ್ಲೂ ನೃತ್ಯಾಭ್ಯಾಸ ಅಂದ್ರೆ ಇನ್ನೂ ತ್ರಾಸದಾಯಕ. ಹಾಗೆ ಅಭ್ಯಾಸ ಮಾಡುವ ಮೂಲಕ ವ್ಯಾಯಾಮ ಆದಂತಾಗಿ ಫಿಟ್‌ನೆಸ್ ಕಾಪಾಡಿಕೊಳ್ಳಬಹುದು. ದೇಹ ದಣಿಯುವುದರಿಂದ ಫಿಟ್‌ನೆಸ್ ಮೇಂಟೇನ್ ಮಾಡಬಹುದು ಅನ್ನೋದು ಒಂದು ಕಾರಣವಾದರೆ ನೃತ್ಯ ಕಲಿಯಬಹುದು ಅನ್ನೋದು ಇನ್ನೊಂದು ಕಾರಣ. ನೃತ್ಯ ಕಲಿತ ಮೇಲೆ ಎಲ್ಲಿ ಬೇಕಾದರೂ ಪ್ರಾಕ್ಟೀಸ್ ಮಾಡಬಹುದು.
ಹಲವು ಕಡೆ ತರಬೇತಿ
ಝುಂಬಾ ನೃತ್ಯ ಕಲಿಸಲು ಸರ್ಟಿಫಿಕೇಟ್ ಪಡೆದ ಇನ್‌ಸ್ಟ್ರಕ್ಟರ್‌ಗಳು ಅಕ್ವಾ ಝುಂಬಾ ತರಬೇತಿ ನೀಡುತ್ತಾರೆ. ಇನ್‌ಸ್ಟಕ್ಟರ್‌ಗಳು ಹೇಳುವ ಪ್ರಕಾರ ಈ ಝುಂಬಾ ನೃತ್ಯವನ್ನು ಯಾರು ಬೇಕಾದರೂ ಕಲಿಯಬಹುದು. ತುಂಬಾ ಸುಲಭವಾದ ನೃತ್ಯವಾದುದರಿಂದ ಈ ನೃತ್ಯ ಕಲಿಯಲು ವಯಸ್ಸಿನ ಹಂಗಿಲ್ಲ. ಗರ್ಭಿಣಿಯರೂ ಈ ನೃತ್ಯ ಕಲಿಯಬಹುದು. ಬಹಳಷ್ಟು ಮಂದಿ ತಮ್ಮ ತೂಕವನ್ನು ಇಳಿಸಲೆಂದೇ ಈ ಅಕ್ವಾ ಝುಂಬಾ ಕಲಿಯುತ್ತಾರೆ. ಆಮೇಲೆ ನೀರಿನಲ್ಲಿ ಆಟವಾಡುವುದೇ ಖುಷಿಯ ವಿಚಾರ ಆದುದರಿಂದ ಡಾನ್ಸ್ ಕಲಿಯುವ ಹೊತ್ತು ಆನಂದದಿಂದ ಇರಬಹುದು. ಕಲಿಯುವ ಆಸಕ್ತಿ ಇದ್ದರೆ ನಿಮ್ಮ ಹತ್ತಿರದ ತರಬೇತಿ ಕೇಂದ್ರಗಳಲ್ಲಿ ಕಲಿಯಬಹುದು.
ಎಲ್ಲೆಲ್ಲಿ?
ಟ್ರೈಬ್ ಫಿಟ್‌ನೆಸ್ ಕ್ಲಬ್‌ನಲ್ಲಿ ಈ ಅಕ್ವಾ ಝುಂಬಾ ತರಬೇತಿ ನೀಡಲಾಗುತ್ತದೆ. ಸರ್ಟಿಫೈಡ್ ಟ್ರೈನರ್ ಶ್ವೇತಾಂಬರಿ ಶೆಟ್ಟಿ ಮತ್ತು ತಂಡ ಕ್ಲಾಸು ನಡೆಸುತ್ತದೆ.
ದೂ- 9902003001
ಫೇಸ್‌ಬುಕ್- https://www.facebook.com/thetribefitnessclub/home
ಝುಂಬಾ ಸರ್ಟಿಫೈಡ್ ಟ್ರೈನರ್ ಜೆನಿಫರ್ ಶರ್ಮಾ ಅವರೂ ಅ ಅಕ್ವಾ ಝುಂಬಾ ಕ್ಲಾಸುಗಳನ್ನು ನಡೆಸುತ್ತಾರೆ.
ವೆಬ್‌ಸೈಟ್- http://jennifer5.zumba.com/
ಶೋಭಾ ವ್ಯೂ ಲೇಕ್ ಕ್ಲಬ್ ಹೌಸ್, ಸರ್ಜಾಪುರದಲ್ಲಿ ಕ್ಲಾಸ್ ಇದೆ.
ದೂ- 8123459443
ವೆಬ್‌ಸೈಟ್- www.zumba.com
-ಉದಯವಾಣಿ
Comments are closed.