ಕರ್ನಾಟಕ

ಹಿರಿಯ ನಟ ಸಂಕೇತ್ ಕಾಶಿ ಇನ್ನಿಲ್ಲ

Pinterest LinkedIn Tumblr

kashiಬೆಂಗಳೂರು: ಕನ್ನಡದ ಹಿರಿಯ ನಟ, ಖ್ಯಾತ ರಂಗಕರ್ಮಿ ಸಂಕೇತ್ ಕಾಶಿ (50) ನಿಧನರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನ ಮೂಡಲಪಾಳ್ಯದಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಶನಿವಾರ ಸಂಜೆ 3.30ಕ್ಕೆ ಕಾಶಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಕಿರಾತಕ,ಉಲ್ಟಾ ಪಲ್ಟಾ, ಮನೆದೇವ್ರು, ಅಣ್ಯಯ್ಯ, ಮಾಂಗಲ್ಯ ತಂತು ನಾನೇನಾ ಚಿತ್ರ ಸೇರಿದಂತೆ 115ಕ್ಕೂ ಹೆಚ್ಚು ಚಿತ್ರಗಳಲ್ಲಿ ಇವರು ನಟಿಸಿದ್ದರು.

Comments are closed.