ಕರ್ನಾಟಕ

ಸೊಸೆ ಐಶ್ವರ್ಯಾ ಮೇಲೆ ಮುನಿಸಿಕೊಂಡಿರುವ ಅಮಿತಾಬ್ ಬಚ್ಚನ್ …ರಣಬೀರ್ ಕಪೂರ್ ಜೊತೆ ಆಕೆ ಮಾಡಿದ್ದೇನು…?

Pinterest LinkedIn Tumblr

Amitabh-Aishwarya

ಮುಂಬಯಿ: ಏ ದಿಲ್ ಹೇ ಮುಷ್ಕಿಲ್ ಚಿತ್ರದಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ, ರಣಬೀರ್ ಕಪೂರ್ ಜೊತೆ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವುದು ಬಿಗ್ ಬಿ ಅಮಿತಾಬ್ ಬಚ್ಚನ್ ಸೊಸೆ ಮೇಲೆ ಮುನಿಸಿಕೊಳ್ಳಲು ಕಾರಣವಾಗಿದೆಯಂತೆ.

ರಣಬೀರ್ -ಐಶ್ವರ್ಯ ಕ್ಲೋಸ್ ದೃಶ್ಯಗಳಿಗೆ ಬಚ್ಚನ್ ಕುಟುಂಬ ಅಸಮಾಧಾನ ವ್ಯಕ್ತಪಡಿಸಿದೆ. ಸೊಸೆ ಐಶ್ವರ್ಯ ರೈ ರಣಬೀರ್ ಜತೆಗಿನ ಬೆಚ್ಚನೆಯ ದೃಶ್ಯಗಳು ಬಚ್ಚನ್ ಕುಟುಂಬಕ್ಕೆ ಇಷ್ಟವಾಗುತ್ತಿಲ್ವಂತೆ. ಐಶ್ವರ್ಯ -ರಣಬೀರ್ ಮಧ್ಯದ ಕೆಲ ಕ್ಲೋಸ್ ಆಗಿರೋ ದೃಶ್ಯಗಳನ್ನು ತೆಗೆದುವಂತೆ ಬಚ್ಚನ್ ಕುಟುಂಬ ಸೂಚಿಸಿದೆ ಎಂದು ಹೇಳಲಾಗುತ್ತಿದೆ.

ಕರಣ್ ಜೋಹರ್ ಆ ದೃಶ್ಯಗಳನ್ನು ಡಿಲೀಟ್ ಮಾಡ್ಬೇಕು ಎಂಬುದು ಬಚ್ಚನ್ ಅಭಿಪ್ರಾಯವಂತೆ. ರಣ್ ಬೀರ್ ಜೊತೆಗೆ ಲಿಪ್ ಲಾಕ್ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಐಶ್ವರ್ಯ ಈ ಹಿಂದೆಯೇ ನಿರ್ದೇಶಕರಿಗೆ ತಿಳಿಸಿದ್ದರಂತೆ. ಮಗು ಆದ ನಂತರ ಜಸ್ಬಾ ಚಿತ್ರದ ಮೂಲಕ ಮತ್ತೆ ಬಾಲಿವುಡ್ ಗೆ ಎಂಟ್ರಿ ನೀಡಿದ್ದ ಐಶ್ವರ್ಯ ಸರಬ್ಜೀತ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಐಶ್ವರ್ಯಾ ರಣಬೀರ್ ಕಪೂರ್, ಅನುಷ್ಕಾ ಶರ್ಮಾ ಅಭಿನಯದ ಏ ದಿಲ್ ಹೇ ಮುಷ್ಕಿಲ್ ಅಕ್ಟೋಂಬರ್ 28ಕ್ಕೆ ರಿಲೀಸ್ ಕಾಣಲಿದೆ.

Comments are closed.