ಬೆಂಗಳೂರು: ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಕಬೀರ ಸಿನಿಮಾ ನಾಳೆ ರಾಜ್ಯದಾದ್ಯಂತ ತೆರೆಕಾಣಲಿದೆ.
ನೇಕಾರ ಸಮುದಾಯದ ಸಂತ ಕಬೀರನ ಜೀವನ ಚರಿತ್ರೆಯನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಕಾವೇರಿ ನದಿ ತೀರದಲ್ಲಿ ವಾರಣಾಸಿಯನ್ನು ಬಿಂಬಿಸುವ ದೊಡ್ಡ ಸೆಟ್ ಹಾಕಿ ಕಬೀರ ಸಿನಿಮಾವನ್ನು ಚಿತ್ರೀಕರಿಸಲಾಗಿದೆ.
ಈ ಹಿಂದೆ ಕಬಡ್ಡಿ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಇಂದ್ರಬಾಬು ಕಬೀರನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸುಮಾರು 8 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ನಾಯಕಿಯರಾಗಿ ಸನುಷಾ, ವೈಶಾಲಿ ದೀಪಕ್ ಮತ್ತು ಸಂಜನಾ ನಟಿಸಿದ್ದಾರೆ.
ಕನ್ನಡದ ಸಿನಿಮಾಕ್ಕೆ ಮೊದಲ ಬಾರಿಗೆ ಇಸ್ಮಾಯಿಲ್ ದರ್ಬಾರ್ ಸಂಗೀತ ಸಂಯೋಜಿಸಿದ್ದು, ಗೋಪಾಲ ವಾಜಪೇಯಿ ಹಾಡುಗಳನ್ನು ಬರೆದಿದ್ದಾರೆ.
ರಾಜ್ಯದಾದ್ಯಂತ 120 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಬೀರ ತೆರೆಕಾಣಲಿದೆ.
Comments are closed.