ಕರ್ನಾಟಕ

ಎಸ್ಮಾ ಜಾರಿಯೂ ಇಲ್ಲ, ಸಂಬಳ ಹೆಚ್ಚೂ ಮಾಡಲ್ಲ, ಮುಷ್ಕರ ಬಿಡಿ; ಸಿಎಂ

Pinterest LinkedIn Tumblr

Siddu-New-fಬೆಂಗಳೂರು: ಕಳೆದ ಬಾರಿಯೂ ಶೇ.10ರಷ್ಟು ಸಂಬಳ ಹೆಚ್ಚಳ ಮಾಡಿದ್ದೇವೆ. ಆದರೆ ಅವ್ರು ಕೇಳಿದಷ್ಟು ಕೊಡಲು ಸಾಧ್ಯವೇ? ಎಂದು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಬಸ್ ಬಂದ್ ನಡೆಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ನೀಡಿರುವ ಪ್ರತಿಕ್ರಿಯೆ.

ರಾಜ್ಯ ಸಾರಿಗೆ ನೌಕರರ ಮುಷ್ಕರದ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ, ನೌಕರರ ಸಂಬಳದ ಬಗ್ಗೆ ಸಚಿವ ಸಂಪುಟ ಸಭೆ.ಶೇ.8ರಷ್ಟು ಒಪ್ಪಿಗೆ ನೀಡಿದೆ. ಆದರೆ ಶೇ.30, 35ರಷ್ಟು ಹೆಚ್ಚಳ ಮಾಡಲು ಅಸಾಧ್ಯ. ಹಾಗಾಗಿ ವೇತನ ಹೆಚ್ಚಳ ಬಗ್ಗೆ ಮತ್ತೆ ಪ್ರಸ್ತಾಪ ಇಲ್ಲ. ಸಾರಿಗೆ ನೌಕರರ ಜೊತೆ ಮಾತುಕತೆಗೆ ಸಿದ್ದರಿದ್ದೇವೆ. ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಲಿ. ಎಸ್ಮಾ ಜಾರಿ ಮಾಡೋದಿಲ್ಲ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರು ನಿನ್ನೆಯಿಂದಲೇ ಮುಷ್ಕರಕ್ಕೆ ಇಳಿದ ಪರಿಣಾಮ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ರಾಮಲಿಂಗಾರೆಡ್ಡಿ ಜೊತೆ ಚರ್ಚೆ:
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವ ರಾಮಲಿಂಗಾರೆಡ್ಡಿ, ಬಿಎಂಟಿಸಿ ಎಂಡಿ , ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಸಾರಿಗೆ ನೌಕರರ ಮುಷ್ಕರದ ವಿವರವನ್ನು ಸಚಿವರು ಸಿಎಂಗೆ ನೀಡಿದ್ದಾರೆ.
-ಉದಯವಾಣಿ

Comments are closed.