ಮಡಿಕೇರಿ: ಶ್ರೀಮಂಗಲದ ಎಸ್ಟೇಟ್ ಸಮೀಪ ಬಳಿ ಕಾರು ನಿಲ್ಲಿಸಿ ಮೋಜು ಮಸ್ತಿಯಲ್ಲಿ ತೊಡಗಿದ್ದ ರಾಜ್ಯ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ರಮಾನಾಥ್ ರೈ ಪುತ್ರ ದೀಪಕ್ ರೈ ಹಾಗೂ ಸ್ನೇಹಿತರಿಗೆ ಸ್ಥಳೀಯರೇ ಥಳಿಸಿರುವ ಘಟನೆ ನಡೆದಿರುವುದಾಗಿ ಮಾಧ್ಯಮಗಳ ವರದಿ ತಿಳಿಸಿದೆ.
ಇನ್ನೋವಾ ಕಾರಿನಲ್ಲಿ ತನ್ನ ಸ್ನೇಹಿತರೊಂದಿಗೆ ಆಗಮಿಸಿದ್ದ ರೈ ಅವರ ಪುತ್ರ ಮೋಜು ಮಸ್ತಿಯಲ್ಲಿ ತೊಡಗಿದ್ದಾಗ, ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ನಾನು ಮಿನಿಷ್ಟರ್ ಮಗ, ನಿಮ್ಮನ್ನೆಲ್ಲಾ ಜೈಲಿಗೆ ಕಳುಹಿಸುತ್ತೇನೆ ಎಂದು ದೀಪಕ್ ರೈ ಧಮ್ಕಿ ಹಾಕಿದಾಗ ಸ್ಥಳೀಯರು ಥಳಿಸಿ ಶ್ರೀಮಂಗಲ ಠಾಣೆಗೆ ಕರೆದೊಯ್ದಿದ್ದಾರೆ ಎಂದು ವಿವರಿಸಿದೆ.
ಮಗನ ಪುಂಡಾಟಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸಚಿವ ರಮಾನಾಥ್ ರೈ,ನನ್ನ ಮಗ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ನನ್ನ ಮಗ ತಪ್ಪು ಮಾಡಿದ್ದರೆ ಕಾನೂನಿನಂತೆ ಕ್ರಮ ಕೈಗೊಳ್ಳಲಿ. ಆದರೆ ಮಕ್ಕಳು ಎಲ್ಲಿ ಹೋಗಿ ಏನು ತಪ್ಪು ಮಾಡುತ್ತಾರೆ ಎಂದು ಅವರ ಹಿಂದೆಯೇ ಹೋಗಿ ನೋಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
-ಉದಯವಾಣಿ
Comments are closed.