ಕರ್ನಾಟಕ

“ಮೊಹೆಂಜೋದಾರೊ” ನ ಕರಾವಳಿ ಬೆಡಗಿ ಕನ್ನಡತಿ ನಟಿ ಪೂಜಾಗೆ ಡೆಂಗ್ಯೂ ಜ್ವರ

Pinterest LinkedIn Tumblr

pooja_hegde_film

ಮಂಗಳೂರು/ಮುಂಬಯಿ.23: ದಕ್ಷಿಣ ಭಾರತದಲ್ಲಿ ಮೋಡಿ ಮಾಡಿ ಇದೀಗ ‘ಮೊಹೆಂಜೋದಾರೊ’ ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ಬಾಲಿವುಡ್ ಕ್ಷೇತ್ರಕ್ಕೆ ಕಾಲಿಟ್ಟವರು ಕರಾವಳಿ ಬೆಡಗಿ ಕನ್ನಡತಿ ನಟಿ ಪೂಜಾ ಹೆಗ್ಡೆ ಅವರು. ಇನ್ನು ಚಿತ್ರದ ಟ್ರೈಲರ್ ನೋಡಿದ ಅಭಿಮಾನಿಗಳು ಚಿತ್ರದಲ್ಲಿ ನಟಿ ಪೂಜಾ ಮಾಡಿದ ಅದ್ಭುತ ಅಭಿನಯಕ್ಕೆ ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ. ಇವರ ನಟನೆಗೆ ಬಾಲಿವುಡ್ ನಟ ಹೃತಿಕ್ ರೋಷನ್ ಅವರು ಕೂಡ ಹಾಡಿ ಹೊಗಳಿದ್ದರು.

ಈಗಾಗಲೇ ‘ಮೊಹೆಂಜೋದಾರೊ’ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಚಿತ್ರತಂಡ ಪ್ರೊಮೋಷನ್ ನಲ್ಲಿ ಬಿಜಿಯಾಗಿದೆ. ನಟ ಹೃತಿಕ್ ರೋಷನ್ ಸೇರಿದಂತೆ ನಟಿ ಪೂಜಾ ಹೆಗ್ಡೆ ಅವರು ಕೂಡ ಪ್ರೊಮೋಷನ್ ನಲ್ಲಿ ಭಾಗವಹಿಸಬೇಕಿತ್ತು.

ಆದರೆ ನಟಿ ಪೂಜಾ ಹೆಗ್ಡೆ ಅವರಿಗೆ ಡೆಂಗ್ಯೂ ಜ್ವರ ಕಾಡುತ್ತಿರುವುದರಿಂದ ಚಿತ್ರದ ಯಾವುದೇ ಪ್ರೊಮೋಷನ್ ನಲ್ಲಿ ಭಾಗವಹಿಸುತ್ತಿಲ್ಲ. ಕೆಲ ದಿನಗಳ ಹಿಂದೆ ಮೆಡಿಕಲ್ ಚೆಕಪ್ ಮಾಡಿಸಿಕೊಂಡಿದ್ದ ಪೂಜಾ ಅವರಿಗೆ ಡೆಂಗ್ಯೂ ಜ್ವರ ಇರೋದು ಪಕ್ಕಾ ಆಗಿದೆ.

ಆದ್ದರಿಂದ ಚಿಕಿತ್ಸೆ ಪಡೆದುಕೊಂಡು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಈ ಕಾರಣದಿಂದ ನಟಿ ಪೂಜಾ ಹೆಗ್ಡೆ ಅವರು ಸದ್ಯಕ್ಕೆ ಯಾವುದೇ ಪ್ರೊಮೋಷನ್ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

Comments are closed.