ಕರ್ನಾಟಕ

ಅಂತರಾಷ್ಟ್ರೀಯ ಯುನಿಯನ್ ಸೈಕ್ಲಿಸ್ಟ್ (ಯುಸಿಐ)ನ ಸ್ಟ್ರಿಂಟ್ ನಲ್ಲಿ ಭಾರತ ವಿಶ್ವದಲ್ಲೇ ನಂ.1

Pinterest LinkedIn Tumblr

clcling_india_one

ಮಂಗಳೂರು/ ನವದೆಹಲಿ ಜು.23: ಭಾರತ ಕಿರಿಯ ಪುರುಷರ ಸೈಕ್ಲಿಂಗ್ ತಂಡ, ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಯುನಿಯನ್ ಸೈಕ್ಲಿಸ್ಟ್ (ಯುಸಿಐ)ನ ಸ್ಟ್ರಿಂಟ್ ತಂಡದ ವಿಭಾಗದಲ್ಲಿ ನಂ.1 ಸ್ಥಾನ ಪಡೆದಿದೆ.

ಇದರೊಂದಿಗೆ ಭಾರತ ಕಿರಿಯರ ತಂಡ ಅಭೂತಪೂರ್ವ ಸಾಧನೆಯೊಂದನ್ನು ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವಾರದಲ್ಲಿ ರಾರ‍ಯಂಕಿಂಗ್ನ್ನು ಬಿಡುಗಡೆ ಮಾಡಲಾಗಿದೆ. ಪ್ರತಿ 3 ತಿಂಗಳಿಗೊಮ್ಮೆ ರಾರ‍ಯಂಕಿಂಗ್ನ್ನು ಉನ್ನತೀಕರಿಸಲಾಗುತ್ತದೆ.

ಭಾರತ ಕಿರಿಯರ ತಂಡ ಈ ಹಿಂದೆ 11ನೇ ಸ್ಥಾನ ಪಡೆದಿತ್ತು. ಭಾರತ ಸೈಕ್ಲಿಂಗ್ ತಂಡ 1012.5 ಅಂಕಗಳಿಸಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಪೋಲೆಂಡ್ 960 ಅಂಕ ಪಡೆದು 2ನೇ ಸ್ಥಾನಗಳಿಸಿದರೆ, ಕೊರಿಯಾ 900 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

Comments are closed.