ಕರ್ನಾಟಕ

ಪೊಲೀಸರ ಒತ್ತಡ ನಿವಾರಣೆಗೆ ಶಾಪಿಂಗ್‌, ಸಿನೆಮಾ!

Pinterest LinkedIn Tumblr

policeಬೆಂಗಳೂರು: ಪೊಲೀಸರು ಹಾಗೂ ಅಧಿಕಾರಿಗಳು ವಿಪರೀತ ಕರ್ತವ್ಯದ ಒತ್ತಡದಿಂದ ಬಳಲುತ್ತಿದ್ದು, ಮಾನಸಿಕವಾಗಿ ಕುಗ್ಗಿದ್ದಾರೆ ಎಂಬುದನ್ನು ರಾಜ್ಯಸರ್ಕಾರ ಅರಿತುಕೊಂಡಿದೆ. ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಲು ವಿನೂತನ ಕ್ರಮಕ್ಕೆ ಮುಂದಾಗಲಾಗಿದೆ.

ಸರ್ಕಾರದ ಹೊಸ ಕಾರ್ಯಕ್ರಮದ ಪ್ರಕಾರ ಪೊಲೀಸರು ಹಾಗೂ ಅಧಿಕಾರಿಗಳಿಗೆ ವಾರಕ್ಕೆರಡು ದಿನ ರಜೆ ನೀಡಿ ವಾರಕ್ಕೆ ಎರಡು ದಿನ ಶಾಪಿಂಗ್‌, ಸಿನೆಮಾಕ್ಕೆ ಕರೆದುಕೊಂಡು ಹೋಗಲಾಗುವುದು. ಆಯಾ ಜಿಲ್ಲೆಗಳಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಲಾಗುವುದು. ಜೊತೆಗೆ ಚಾರಣ, ಆಟೋಟಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಮಾನಸಿಕ ಒತ್ತಡ ಕುಗ್ಗಿಸುವ ಇನ್ನೊಂದು ಕ್ರಮದಲ್ಲಿ ಜಿಲ್ಲಾವಾರು ಪ್ರಸಿದ್ಧ ಹಾಸ್ಯ ಕಲಾವಿದರಿಂದ “ಹಾಸ್ಯ ರಸಾಯನ’ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದಾಗಿ ಅವರು ಮನಸೋ ಇಚ್ಛೆ ನಕ್ಕು ಮನಸ್ಸು ಹಗುರ ಮಾಡಿಕೊಳ್ಳಲಿದ್ದಾರೆ.
-ಉದಯವಾಣಿ

Comments are closed.