ಕರ್ನಾಟಕ

ಕೊನೆಗೂ ಜಾರ್ಜ್ ವಿರುದ್ಧ FIR ದಾಖಲು

Pinterest LinkedIn Tumblr

Finally-FIRರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಲುಕಿಸಿದ್ದ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಡಿಕೇರಿ ಜೆಎಂಎಫ್ ಕೋರ್ಟ್ ಆದೇಶದ ನಂತರ ಕೆಜೆ ಜಾರ್ಜ್ ಅವರ ತಲೆದಂಡ ಪಡೆದಿದ್ದರೆ, ಮಂಗಳವಾರ ಕೊನೆಗೂ ಮಡಿಕೇರಿ ಟೌನ್ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ಕೆಜೆ ಜಾರ್ಜ್, ಅಧಿಕಾರಿಗಳಾದ ಮೊಹಂತಿ, ಎ.ಎಂ ಪ್ರಸಾದ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಸೆಕ್ಷನ್ 89/16ರ ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಿಕೊಂಡಿದ್ದು, ಕೆಜೆ ಜಾರ್ಜ್ 1ನೇ ಆರೋಪಿ, ಮೊಹಂತಿ 2ನೇ ಹಾಗೂ ಪ್ರಸಾದ್ 3ನೇ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಏತನ್ಮಧ್ಯೆ ಮೊಹಂತಿ ಮತ್ತು ಎ.ಎಂ.ಪ್ರಸಾದ್ ಗಣಪತಿ ಪ್ರಕರಣದಲ್ಲಿ ಮಡಿಕೇರಿ ಜಿಲ್ಲಾ ಕೋರ್ಟ್ ನೀಡಿರುವ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಆದರೆ ಮಡಿಕೇರಿ ಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ಹೈಕೋರ್ಟ್ ಏಕಸದಸ್ಯ ಪೀಠ ನಿರಾಕರಿಸಿದ್ದು, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
-ಉದಯವಾಣಿ

Comments are closed.