ಕರ್ನಾಟಕ

1 ಗಂಟೆವರೆಗೆ ಬಾರ್ ಓಪನ್ ವಿರೋಧಿಸಿ ವಾಟಾಳ್‍ ಪ್ರತಿಭಟನೆ

Pinterest LinkedIn Tumblr

vatal

ಬೆಂಗಳೂರು: ತಡರಾತ್ರಿ 1 ಗಂಟೆವರೆಗೆ ಬಾರ್ ತೆರೆಯುವುದನ್ನು ವಿರೋಧಿಸಿ ಮದ್ಯಪಾನ ಭೂತಕ್ಕೆ ಮದ್ಯಾಭಿಷೇಕ ಮಾಡುವ ಮೂಲಕ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕೆಂಪೇಗೌಡ ಬಸ್ ನಿಲ್ದಾಣದ ಹತ್ತಿರ ಇಂದು ವಿನೂತನ ಚಳವಳಿ ನಡೆಸಿದರು. ಮದ್ಯಪಾನದಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಅದರಲ್ಲೂ ತಡರಾತ್ರಿ 1 ಗಂಟೆವರೆಗೆ ಮದ್ಯ ಸರಬರಾಜು ಮಾಡುವ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಸರ್ಕಾರ ಕೂಡಲೇ ಈ ಕ್ರಮವನ್ನು ಹಿಂದಕ್ಕೆ ಪಡೆಯಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.

ಸಾರ್ವಜನಿಕರ ಮೇಲೆ ಕಾಳಜಿ ಇದ್ದಿದ್ದರೆ ಸಂಪೂರ್ಣ ಪಾನ ನಿಷೇಧವನ್ನು ಜಾರಿಗೆ ತರಬೇಕಿತ್ತು. ಅದಕ್ಕೆ ಬದಲು ರಾತ್ರಿ ಎಲ್ಲ ಮದ್ಯಪಾನ ಮಾಡಬಹುದೆಂದು ಸರ್ಕಾರ ಆದೇಶ ನೀಡಿರುವುದು ಅತ್ಯಂತ ನೋವಾಗಿದೆ ಎಂದು ವಾಟಾಳ್ ತಿಳಿಸಿದರು.

ರಾತ್ರಿ 1 ಗಂಟೆವರೆಗೆ ಮದ್ಯದ ಅಂಗಡಿಗಳನ್ನು ತೆರೆಯುವುದರಿಂದ ಕಾನೂನು ವ್ಯವಸ್ಥೆ ಹದಗೆಡುತ್ತದೆ. ಈಗಾಗಲೇ ಪೆÇಲೀಸರಿಗೆ ಕೆಲಸದ ಒತ್ತಡ ಹೆಚ್ಚಾಗಿ ಅನಾಹುತಗಳು ಸಂಭವಿಸುತ್ತಿವೆ. ಮತ್ತೆ ಅವರ ಮೇಲೆ ಕೆಲಸದ ಒತ್ತಡ ಹೆಚ್ಚಾಗುವುದಲ್ಲದೆ ಅನಾಹುತಗಳು ಹೆಚ್ಚಾಗುತ್ತವೆ. ಈ ಆದೇಶದಿಂದ ಮಹಿಳೆಯರು ಬೆಚ್ಚಿ ಬಿದ್ದಿದ್ದಾರೆ. ಸರ್ಕಾರ ಈ ಆದೇಶವನ್ನು ಹಿಂದಕ್ಕೆ ಪಡೆಯದಿದ್ದರೆ ಆಂದೋಲನದ ಮಾದರಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

Comments are closed.