ಕರ್ನಾಟಕ

ಗೋಹತ್ಯೆ ನಿಷೇಧ ಜಾರಿ ಅಗತ್ಯ

Pinterest LinkedIn Tumblr

govuಬೆಂಗಳೂರು, ಜು. ೧೬- ರಾಜ್ಯದಲ್ಲಿ ಗೋಹತ್ಯೆ ಮಸೂದೆ ನಿಷೇಧವನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಲೆಹರ್ ಸಿಂಗ್ ಹೇಳಿದರು.

ನಗರದಲ್ಲಿಂದು ಕರ್ನಾಟಕ ಗೋಶಾಲಾ ಮಹಾ ಸಂಘ ಆಯೋಜಿಸಿದ್ದ ಶ್ರೀ ಬಿಜಿಎಸ್ ಗೋರತನ್ ಸನ್ಮಾನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗೋಹತ್ಯೆ ತಡೆ ಮಸೂದೆ ಜಾರಿ ಮಾಡಲು ಸಾಧ್ಯವಾಗಿಲ್ಲ. ಇದನ್ನು ಜಾರಿ ಮಾಡುವ ಅಗತ್ಯವಿದೆ ಎಂದರು.

ಗೋಶಾಲೆಗಳು ಈಗ ಗೋಮಾಫಿಯಾಗಳಾಗಿ ಬದಲಾಗಿವೆ. ಗೋ ಸಂರಕ್ಷಣೆ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಇದಕ್ಕೆಲ್ಲಾ ಕಡಿವಾಣ ಹಾಕುವ ಅಗತ್ಯವಿದೆ ಎಂದರು.

ಗೋಸಂರಕ್ಷಣೆಗೆ ಗೋಶಾಲೆಗಳನ್ನು ಆರಂಭಿಸುವವರು ಗೋವುಗಳ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಬೇಕಿದೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ರಾದ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪರವಾಗಿ ಲೆಹರ್ ಸಿಂಗ್ ಅವರಿಗೆ ಗೋರತ್ನ ಸನ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೆಯೇ ಮಹೇಂದ್ರ ಮುನ್ನೋಟ್ ಹಾಗು ಪಿಂಜಾರ ಸೊಸೈಟಿಗೂ ಗೋರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಆದಿಚುಂಚನಗಿರಿ ಶಾಖಾಮಠದ ಮಠಾಧೀಶರಾದ ಸೌಮ್ಯನಾಥ ಸ್ವಾಮೀಜಿ, ನಿವೃತ್ತ ಐಎ‌ಎಸ್ ಅಧಿಕಾರಿ ಕೆ. ಅಮರ ನಾರಾಯಣ್, ಕರ್ನಾಟಕ ಗೋಶಾಲಾ ಮಹಾಸಂಘದ ಅಧ್ಯಕ್ಷ ಡಾ. ಎಸ್.ಕೆ. ಮಿತ್ತಲ್, ಜಂಟಿ ಕಾರ್ಯದರ್ಶಿ ಡಿ.ಎಚ್. ಶಿಂಡೆ, ಕಾರ್ಯದರ್ಶಿ ಗೌತಮ್ ಸಲೆಜಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Comments are closed.