ನವದೆಹಲಿ ಜು.16: ಕೆಲವರ ಟೀಕೆ, ಟಿಪ್ಪಣಿಗಳ ಮಧ್ಯೆಯೇ ಅಮೆಚುರ್ ಬಾಕ್ಸಿಂಗ್ನಿಂದ ವೃತ್ತಿಪರ ಬಾಕ್ಸಿಂಗ್ಗೆ ಇಳಿದು ಇಲ್ಲೀವರೆಗಿನ ಆರು ಬೌಟ್ಗಳಲ್ಲಿ ಅಜೇಯ ಯಾತ್ರೆ ಮುಂದುವರೆಸಿರುವ ಭಾರತದ ನಂ.1 ಬಾಕ್ಸರ್ ವಿಜೇಂದರ್ ಸಿಂಗ್ ಇದೀಗ ಶನಿವಾರ ತವರಿನಲ್ಲಿ ನಡೆಯುತ್ತಿರುವ ಡಬ್ಲ್ಯೂಬಿಒ ಏಷ್ಯಾ ಪೆಸಿಫಿಕ್ ಸೂಪರ್ ಮಿಡಲ್ವೇಟ್ ಪ್ರಶಸ್ತಿಗಾಗಿ ಮಹತ್ವದ ಫೈಟ್ಗೆ ಅಣಿಯಾಗಿದ್ದಾರೆ.
ಇಲ್ಲಿನ ತ್ಯಾಗರಾಜ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ಪ್ರಶಸ್ತಿಗಾಗಿನ ಸೆಣಸಾಟದಲ್ಲಿ ಮಾಜಿ ಡಬ್ಲ್ಯೂಬಿಸಿ ಮಿಡಲ್ವೇಟ್ ಚಾಂಪಿಯನ್, ಆಸ್ಪ್ರೇಲಿಯಾದ 34ರ ಹರೆಯದ ಕೆರ್ರಿ ಹೋಪ್ ವಿರುದ್ಧ 30 ವರ್ಷದ ವಿಜೇಂದರ್ ಕಾದಾಡಲಿದ್ದಾರೆ. ಮೊಟ್ಟಮೊದಲ ಬಾರಿಗೆ 10 ಸುತ್ತಿನ ಸೆಣಸಾಟ ಇದಾಗಿರುವುದೂ ಅವರ ಮೇಲಿನ ಒತ್ತಡವನ್ನು ಹೆಚ್ಚಿಸಿದೆ.
ಅಂದಹಾಗೆ ವೃತ್ತಿಪರ ಬಾಕ್ಸಿಂಗ್ಗೆ ಕಾಲಿಟ್ಟಬಳಿಕ ವಿಜೇಂದರ್ ತವರಿನಲ್ಲಿ ಸೆಣಸುತ್ತಿರುವುದು ಇದೇ ಮೊದಲ ಬಾರಿ. ಸಹಜವಾಗಿಯೇ ದೆಹಲಿಯ ಬಾಕ್ಸಿಂಗ್ ಹಾಲ್ ಕಿಕ್ಕಿರಿದು ತುಂಬುವ ನಿರೀಕ್ಷೆ ಸಂಘಟಕರದ್ದು. ಕೇವಲ ಟಿವಿಗಳಲ್ಲಷ್ಟೇ ವಿಜೇಂದರ್ ಫೈಟ್ ಅನ್ನು ಕಣ್ತುಂಬಿಕೊಳ್ಳುತ್ತಿದ್ದ ಬಾಕ್ಸಿಂಗ್ ಪ್ರಿಯರು ಇದೀಗ ಖುದ್ದು ಸಾಕ್ಷಿಯಾಗುವ ಸಂಭ್ರಮದಲಿದ್ದಾರೆ.
ಈ ಹಿಂದಿನ ಆರೂ ಬಾಕ್ಸಿಂಗ್ಗಳಲ್ಲಿ ಎದುರಾಳಿಗಳಿಗೆ ಶಕ್ತಿಶಾಲಿ ಗುದ್ದು, ಪಂಚ್ ಹಾಗೂ ತ್ವರಿತಗತಿಯ ಚಲನೆಯಿಂದ ಮಿಂಚಿರುವ ವಿಜೇಂದರ್ಗೆ ಆಸ್ಪ್ರೇಲಿಯಾ ಬಾಕ್ಸರ್ ಸವಾಲಾಗಿ ಪರಿಣಮಿಸುವ ಸಾಧ್ಯತೆಯೂ ಇದೆ. ಕಾರಣ, ಕೆರ್ರಿ ಹೋಪ್ ಅಂತಿಂಥ ಬಾಕ್ಸರ್ ಅಲ್ಲ. ಆತ ವೃತ್ತಿಪರ ಬಾಕ್ಸಿಂಗ್ಗೆ ಕಾಲಿಟ್ಟು ಒಂದು ದಶಕವೇ ಕಳೆದಿದ್ದು ಒಟ್ಟಾರೆ ಸೆಣಸಾಟದಲ್ಲಿ 23-7ರ ಪ್ರಾಬಲ್ಯ ಸಾಧಿಸಿದ್ದಾರೆ. ಇತ್ತ ಒಲಿಂಪಿಕ್, ಕಾಮನ್ವೆಲ್ತ್, ಏಷ್ಯಾ ಕ್ರೀಡಾಕೂಟ ಹಾಗೂ ವಿಶ್ವ ಚಾಂಪಿಯನ್ಶಿಪ್ಗಳಲ್ಲಿ ವಿಜೇಂದರ್ ಪದಕ ಗೆದ್ದಿದ್ದರೆ, ಕೆರ್ರಿ ಹೋಪ್ ಇಂಥದ್ದೇನನ್ನೂ ಸಾಧಿಸಿಲ್ಲ. ಹೀಗಾಗಿ ಉಭಯರ ಈ ಬೌಟ್ ಬಾಕ್ಸಿಂಗ್ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲಿಸಿದೆ.
ಕೆರ್ರಿ ಬಾಕ್ಸಿಂಗ್ನಲ್ಲಿ ಅಪಾರ ಅನುಭವ ಗಳಿಸಿದ್ದಾರೆ. ಆದರೆ, ನಾನು ಒಲಿಂಪಿಕ್ ಪದಕ ವಿಜೇತ. ಇದೇನೂ ಸಾಮಾನ್ಯ ಸಂಗತಿಯಲ್ಲ. ನಿಸ್ಸಂಶಯವಾಗಿ ಈ ಪಂದ್ಯ ಅತ್ಯಂತ ಆಸಕ್ತಿ ಕೆರಳಿಸಿದೆ. ಆದರೆ, ಇಂದು ರಾತ್ರಿ ಯಾರು ಶ್ರೇಷ್ಠ ಎಂಬುದು ನಿರೂಪಿತವಾಗಲಿದೆ. ರಿಂಗ್ನಲ್ಲಿ ಹೋಪ್ ಅವರನ್ನು ಮಣಿಸಲು ಶೇ. 100ರಷ್ಟುನನೆÜ್ನಲ್ಲ ಶಕ್ತಿಯನ್ನೂ ಧಾರೆ ಎರೆಯಲಿದ್ದೇನೆ.
ವಿಜೇಂದರ್, ಭಾರತದ ಮೊಟ್ಟಮೊದಲ ವೃತ್ತಿಪರ ಬಾಕ್ಸರ್
ಪಂದ್ಯ ಆರಂಭ: ರಾತ್ರಿ 7.00, ಸ್ಥಳ: ತ್ಯಾಗರಾಜ ಸ್ಟೇಡಿಯಂ
10
ಸುತ್ತಿನ ಫೈಟ್ ಪ್ರಪ್ರಥಮ ಬಾರಿಗೆ
12
ವರ್ಷ ವೃತ್ತಿಪರ ಬಾಕ್ಸಿಂಗ್ನಲ್ಲಿ ಕೆರ್ರಿಗಿರುವ ಅನುಭವ
23
ಬೌಟ್ಗಳಲ್ಲಿ ಜಯ ಕಂಡಿರುವ ಕೆರ್ರಿ ಹೋಪ್
06
ಸತತ ಬೌಟ್ಗಳಲ್ಲಿ ವಿಜೇಂದರ್ ಅಜೇಯ ಯಾತ್ರೆ
11
ವೃತ್ತಿಬದುಕಿನ ಮೊದಲ ಹಂತದ ಬಾಕ್ಸಿಂಗ್ಗಳಲ್ಲಿ ಕೆರ್ರಿ ಸಾಧನೆ
15
ಕೆರ್ರಿ ಮಣಿಸಿದರೆ ವಿಶ್ವ ಶ್ರೇಯಾಂಕಕ್ಕೆ ಏರಲಿರುವ ವಿಜೇಂದರ್
Comments are closed.