ಬೆಂಗಳೂರು, ಜು. ೧೪ – ಬೇಕೇ ಬೇಕು ಕಾಗೋಡು ತಿಮ್ಮಪ್ಪ ಅವರ ನಾಯಕತ್ವಬೇಕು, ಅವರು ಮತ್ತೆ ಸಭಾಧ್ಯಕ್ಷರಾಗಿ ಸರಕಾರದ ಕಿವಿ ಹಿಂಡಿ, ಜಾರ್ಜ್‌ಅವರ ರಾಜೀನಾಮೆ ಕೊಡಿಸಬೇಕು ಎಂದು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ, ಜೆಡಿಎಸ್ ಸದಸ್ಯರು ಘೋಷಣೆ ಕೂಗಿ ಕಾಗೋಡು ಅವರನ್ನು ಕಿಚಾಯಿಸಿದ ಅಪರೂಪದ ಘಟನೆ ಇಂದು ನಡೆಯಿತು.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಸಚಿವ ಜಾರ್ಜ್ ಕಾರಣ ಎಂದು ಆರೋಪಿಸಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಇಂದು ಕೂಡ ಧರಣಿ ಮುಂದುವರೆಸಿ ಕಾಗೋಡು ಅವರು ಮತ್ತೆ ಸಭಾಧ್ಯಕ್ಷರಾಗಬೇಕೆಂದು ಒತ್ತಾಯಿಸಿದರು. ಸದನದ ಕಲಾಪ ಆರಂಭವಾಗುತ್ತಿದ್ದಂತೆ ಧರಣಿ ನಿರತ ಸದಸ್ಯರಿಂದ ಭಾರಿ ಗದ್ದಲ ಶುರುವಾದ ಹಿನ್ನಲೆಯಲ್ಲಿ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ೧೫ ನಿಮಿಷ ಕಾಲ ಕಲಾಪವನ್ನು ಮುಂದೂಡಿದರು. ಆದರೆ ಧರಣಿ ನಿರತ ಸದಸ್ಯರು ಮಾತ್ರ ಸದನದ ಮುಂದೆಯೇ ನಿಂತು ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಆ ಸಂದರ್ಭದಲ್ಲಿ ಸಚಿವ ಸ್ಥಾನದಿಂದ ಸದನಕ್ಕೆ ಹಾಜರಾಗಿ ಮುಂದಿನ ಸಾಲಿನಲ್ಲಿ ಕುಳಿತ್ತಿದ್ದ ಕಾಗೋಡು ತಿಮ್ಮಪ್ಪ ಅವರತ್ತ ಧರಣಿ ಸದಸ್ಯರು ತಿರುಗಿ ಬೇಕೇ ಬೇಕು ಕಾಗೋಡು ಅವರ ನಾಯಕತ್ವಬೇಕು, ಒಂದು ಗಂಟೆಯಾದರೂ ಅವರು ಸಭಾಧ್ಯಕ್ಷರಾಗಿ ಸರಕಾರದ ಕಿವಿ ಹಿಂಡಬೇಕು ಎಂದು ಪ್ರತಿಪಕ್ಷಗಳ ಸದಸ್ಯರು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಆ ವೇಳೆ ಕಾಗೋಡು ತಿಮ್ಮಪ್ಪ ಅವರು ಮಾತ್ರ ಕೈಮುಗಿದು, ನಗುಮುಗದಿಂದಲೇ ಕುಳಿತ್ತಿದ್ದರು.
Comments are closed.