ಕರ್ನಾಟಕ

ಮಹದಾಯಿ ಜಟಾಪಟಿ;ಕರ್ನಾಟಕಕ್ಕೆ ಮೇಲುಗೈ, ಗೋವಾಕ್ಕೆ ಭಾರೀ ಹಿನ್ನಡೆ

Pinterest LinkedIn Tumblr

Mahadayaiಬೆಂಗಳೂರು:ಕಳಸಾ ಬಂಡೂರಿ, ಮಹದಾಯಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಗೋವಾ ಸರ್ಕಾರ ಭಾರೀ ಹಿನ್ನಡೆ ಅನುಭವಿಸಿದ್ದು, ಕರ್ನಾಟಕ ಮೇಲುಗೈ ಸಾಧಿಸಿದೆ. ಗೋವಾ ಸರ್ಕಾರದ ಪರ ಸುಳ್ಳು ಸಾಕ್ಷಿ ಹೇಳಿ ಅಫಿಡವಿಟ್ ಸಲ್ಲಿಸಿದ್ದ ಜ್ಯೋತಿಪ್ರಕಾಶ್ ಅವರಿಗೆ ಮಹದಾಯಿ ನ್ಯಾಯಾಧೀಕರಣ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಗೋವಾ ಸರ್ಕಾರ ಕ್ಷಮೆಯಾಚಿಸಿ ಅಫಿಡವಿಟ್ ಅನ್ನು ವಾಪಸ್ ಪಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಮಹದಾಯಿ ನ್ಯಾಯಾಧೀಕರಣದಲ್ಲಿ ನಡೆದ ವಿಚಾರಣೆಯಲ್ಲಿ ಮುಂಬೈನ ಐಐಟಿ ಪ್ರಾಧ್ಯಾಪಕ ವಿ.ಜ್ಯೋತಿಪ್ರಕಾಶ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಮಹದಾಯಿ ಕಣಿವೆಯಲ್ಲಿ ನೀರಿನ ಹರಿವು 102 ಟಿಎಂಸಿ ಇದೆ ಎಂದು ಅಫಿಡವಿಟ್ ಕೊಟ್ಟಿದ್ದರು. ಈ ಅಂಕಿಅಂಶ ಸುಳ್ಳು ಎಂದು ನ್ಯಾಯಾಧೀಕರಣ ಅಸಮಾಧಾನವ್ಯಕ್ತಪಡಿಸಿದೆ.

ಇದು ಅತಿಯಾದ ಬೇಜವಾಬ್ದಾರಿ ವರ್ತನೆ. ನೀವು ಈ ಬಗ್ಗೆ ಕ್ಷಮೆ ಕೋರಿ, ಇಲ್ಲ ನಿಮ್ಮ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ನ್ಯಾಯಾಧೀಕರಣ ಎಚ್ಚರಿಕೆ ನೀಡಿತು. ಕರ್ನಾಟಕದ ಪರ ಪಾಟಿ ಸವಾಲ್ ಆದ ಬಳಿಕ ನ್ಯಾಯಾಧೀಕರಣ ತರಾಟೆಗೆ ತೆಗೆದುಕೊಂಡಿತ್ತು.
-ಉದಯವಾಣಿ

Comments are closed.