ಕರ್ನಾಟಕ

ಸರ್ಕಾರಕ್ಕೆ ಹೊಸ ತಲೆನೋವು

Pinterest LinkedIn Tumblr

siddu-5ಬೆಂಗಳೂರು,ಜು.೯-ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಒಂದಲ್ಲ ಒಂದು ಸಮಸ್ಯೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ ಇಲಾಖೆಯ ಪ್ರತಿ ಹಂತದಲ್ಲೂ ಎದುರಾಗುತ್ತಿರುವ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಮುಖ್ಯಮಂತ್ರಿಗಳಿಗೆ ಹೆಣಗಾಡಬೇಕಾದ ಸಂಕಟ ಉಂಟಾಗಿದೆ.!

ರಾಜ್ಯ ಸರ್ಕಾರಕ್ಕೆ ಎದುರಾಗುವ ಸಮಸ್ಯೆಗಳ ಮಾಹಿತಿ ಅದನ್ನು ನಿವಾರಿಸುವ ಸಲಹೆ ನೀಡಬೇಕಾದ ಪೊಲೀಸ್ ಇಲಾಖೆಯಿಂದಲೇ ಒಂದಲ್ಲ ಒಂದು ಸಮಸೈ ಎದುರಾಗುತ್ತಿರುವುದು ಮುಖ್ಯಮಂತ್ರಿಗಳಿಗೆ ನುಂಗಲಾರದ ತುತ್ತಾಗಿದೆ.
ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ದಕ್ಕೆ ಉಂಟುಮಾಡುವಲ್ಲಿ ಸರ್ಕಾರದ ವಿರುದ್ಧ ಜನತೆಯಲ್ಲಿ ಆಕ್ರೋಶ ಉಂಟಾಗುವಲ್ಲಿ ಗೃಹ ಇಲಾಖೆಯ ಪಾಲು ದೊಡ್ಡದಿದೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ,ಅತ್ಯಾಚಾರ ಪ್ರಕರಣಗಳಿಂದ ಆರಂಭಗೊಂಡ ಗೃಹ ಇಲಾಖೆಯ ವೈಫಲ್ಯ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದವರೆಗೆ ತಲುಪಿದ್ದು
ಗೃಹ ಇಲಾಖೆಯ ಸಲಹೆಗಾರರಾಗಿರುವ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರು ಸರ್ಕಾರಕ್ಕೆ ನೀಡುವ ಸಲಹೆಯಾದರೂ ಎನು? ಅಧಿಕಾರದ ಅನುಭವ ಹೊಂದಿರುವ ಕೆಂಪಯ್ಯ ಅವರಿಂದ ಇಲಾಖೆಗೆ ಎನಾದರೂ ಉಪಯೋಗವಾಗಿದೆಯೇ? ಎಂಬ ಪ್ರಶ್ನೆಉದ್ಭವವಾಗಿದೆ.
ಶಾಲೆಗಳಲ್ಲಿ ಮಕ್ಕಲ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಾಗ ಅಂದಿನ ಗೃಹ ಸಚಿವ ಕೆಜೆ ಜಾರ್ಜ್ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿ ಮುಖ್ಯಮಂತ್ರಿಗಳನ್ನು ಪೇಚಿಗೆ ಸಿಲುಕಿಸಿದರೆ ಡಿಕೆ ರವಿ ಆತ್ಮಹತ್ಯೆ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ ನಡೆಯುವ ಮುನ್ನವೇ ರವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಅಂದಿನ ನಗರ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ವಿವಾದ ಸೃಷ್ಟಿಸಿದ್ದರು.
ಎಡಿಜಿಪಿ ರವೀಂದ್ರನಾಥ್ ಅವರ ರಾಜೀನಾಮೆ ಪ್ರಕರಣ ಪೊಲೀಸರೇ ಲಾಟರಿ ಹಗರಣದಲ್ಲಿ ಸಿಲುಕಿ ಎದುರಿಸಿದ ಸಮಸ್ಯೆ ಕೂಡ್ಲಿಗಿ ಡಿವೈಎಸ್‌ಪಿ ಅನುಪಮಾ ಶೆಣೈ ವರ್ಗಾವಣೆ ಬಳಿಕ ರಾಜೀನಾಮೆ ಗಲಾಟೆ ಕೆಲ ದಿನಗಳ ಹಿಂದೆ ಚಿಕ್ಕಮಗಳೂರಿನ ಡಿವೈಎಸ್‌ಪಿ ಕಲ್ಲಪ್ಪ ಅಪಹರಣ ಆತ್ಮಹತ್ಯೆ ಪ್ರಕರಣವನ್ನು ನಿಭಾಯಿಸುವಲ್ಲೂ ಗೃಹ ಇಲಾಖೆ ಸಂಪೂರ್ಣ ವಿಫಲವಾಯಿತು.
ಅದಕ್ಕಿಂತಲೂ ಮುಖ್ಯವಾಗಿ ರಾಜ್ಯದ ಇತಿಹಾಸದಲ್ಲಿ ಪೊಲೀಸರೇ ಮೊದಲ ಬಾರಿಗೆ ಪ್ರತಿಭಟನೆ ನಡೆಸಲು ಮುಂದಾಗಿದ್ದು ಸಿದ್ದರಾಮಯ್ಯನವರಿಗೆ ಮತ್ತೊಂದು ಸಮಸ್ಯೆ ಯಾಗಿ ಪರಿಣಮಿಸಿತು ಅದನ್ನು ನಿಭಾಯಿಸುವಲ್ಲಿ ಹೆಣಗಾಡುವಂತಾಯಿತು.ಕೆಲ ಘಟನೆಗಳಿಗೆ ಸಚಿವರು ಕಾರಣಾರಾದರೂ ಗೃಹ ಸಚಿವರ ಸಲಹೆಗಾರರಾಗಿರುವ ಕೆಂಪಯ್ಯನವರು ಯಾವ ಸಲಹೆ ನೀಡುತ್ತಿದ್ದಾರೆ ಎನ್ನುವ ಪ್ರಶ್ನೆ ಕಾಡತೊಡಗಿತು.
ಕಳೆದ ೨೦೧೪ರ ಆಗಸ್ಟ್ ನಲ್ಲಿ ಗೃಹ ಸಚಿವರ ಸಲಹೆಗಾರರಾಗಿ ನೇಮಕವಾದ ಕೆಂಪಯ್ಯಗೆ ಸಮಸ್ಯೆಗಳನ್ನು ಸರಿಯಾಗಿ ಪರಿಹಾರ ಮಾಡಲು ಬರುದಿಲ್ಲವೇ ಎನ್ನುವ ಪ್ರಶ್ನೆ ಈಗ ಎದ್ದಿದೆ. ಲೋಕಾಯುಕ್ತ ರಂಪಾಟ, ಎಸಿಬಿ ರಚನೆಯ ರಗಳೆಯ ಜೊತೆ ಈ ಮೇಲೆ ತಿಳಿಸಿದ ಪ್ರಕರಣ ನಿಭಾಯಿಸುವಲ್ಲೂ ಎಡವಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಚಾರ್ಯ ಅವರು ಗೃಹ ಸಚಿವರಾಗಿದ್ದರು. ಈ ವೇಳೆ ಮಂಗಳೂರಿನಲ್ಲಿ ಚರ್ಚ್ ಗಲಾಟೆ ನಿರ್ವಹಣೆಯಲ್ಲಿ ಎಡವಿದ್ದು ಬಿಟ್ಟರೆ ಬೇರೆ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು ಆಚಾರ್ಯ ನಿಧನರಾದ ಬಳಿಕ ಆರ್. ಅಶೋಕ್ ಗೃಹ ಸಚಿವರಾದರು. ಈ ವೇಳೆಯೂ ರಾಜ್ಯದೆಲ್ಲೆಡೆ ಚರ್ಚೆಗೆ ಗ್ರಾಸವಾಗುವ ಭದ್ರತಾ ವೈಫಲ್ಯ ಕಂಡು ಬರಲಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಗೃಹ ಇಲಾಖೆಯ ಅಧಿಕಾರಿಗಳ ಕಿತ್ತಾಟ ಇತ್ಯಾದಿಗಳು ಈ ಅವಧಿಯಲ್ಲಿ ಸುದ್ದಿಯಾಗಿರಲಿಲ್ಲ. ಬಿಜೆಪಿ ಅವಧಿಯಲ್ಲಿ ಇಬ್ಬರು ಗೃಹ ಸಚಿವರಾಗಿದ್ದರೂ ಅವರಿಗೆ ಸಲಹೆ ನೀಡಲು ಪ್ರತ್ಯೇಕ ಅಧಿಕಾರಿಯನ್ನು ನೇಮಿಸಿರಲಿಲ್ಲ. ಈ ವೇಳೆ ಪೊಲೀಸ್ ಇಲಾಖೆ ದಕ್ಷವಾಗಿತ್ತು, ಸಿಎಂಗೆ ಮುಜುಗರವಾಗಿರಲಿಲ್ಲ.
ಆದರೆ, ಸಿದ್ದರಾಮಯ್ಯ ಸರ್ಕಾರದಲ್ಲಿ ಗೃಹಸಚಿವರು ಬದಲಾದರೂ ಗೃಹ ಇಲಾಖೆಯ ಸಮಸ್ಯೆಗೆ ಮಾತ್ರ ಪರಿಹಾರ ಕಾಣುತ್ತಿಲ್ಲ. ಒಂದರ ನಂತರ ಒಂದರಂತೆ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿದೆ ಸರ್ಕಾರ. ಇದನ್ನೆಲ್ಲ ನೋಡುವಾಗ ಇಲಾಖೆಯ ಸಲಹೆಗಾರರಾದ ಕೆಂಪಯ್ಯ ಏನ್ ಮಾಡ್ತಿದ್ದಾರೆ ಗೃಹ ಇಲಾಖೆಗೆ ಇವರ ಸಲಹೆ ವರ್ಗಾವಣೆ ವ್ಯವಹಾರಕ್ಕೆ ಮಾತ್ರ ಸೀಮಿತವೇ ಎನ್ನುವುದು ಪ್ರಶ್ನೆಯಾಗಿದೆ.

Comments are closed.