
ಮಡಿಕೇರಿ: ಮಗ ಗಣಪತಿ ಸಾವಿಗೆ ಸೊಸೆ ಪಾವನಾ ಕೂಡ ಕಾರಣ. ಅಧಿಕಾರಿಗಳ ಕಿರುಕುಳದ ಜೊತೆಗೆ ಪತ್ನಿ ಹಿಂಸೆಯಿಂದ ಗಣಪತಿ ನೇಣಿಗೆ ಶರಣಾಗಿದ್ದಾನೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗಣಪತಿ ತಂದೆ ಕುಶಾಲಪ್ಪ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮನೆಯಲ್ಲಿ ಗಣಪತಿ ಮತ್ತು ಪಾವನಾ ನಡುವೆ ಬಹಳ ವರ್ಷದಿಂದ ಹೊಂದಾಣಿಕೆ ಇರಲಿಲ್ಲ. ಮನೆಗೆ ಬಂದಾಗ ಪತ್ನಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಳು. ಇದರ ಜೊತೆ ಹಿರಿಯ ಅಧಿಕಾರಿಗಳು ಸಾಕಷ್ಟು ಕಿರುಕುಳ ನೀಡುತ್ತಿದ್ದರು. ಈ ಎಲ್ಲ ಕಾರಣದಿಂದ ನೊಂದು ಮಗ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಶಾಲಪ್ಪ ದೂರು ನೀಡಿದ್ದಾರೆ.
ತಂದೆ ಕುಟುಂಬದ ಭಿನ್ನಾಭಿಪ್ರಾಯದ ವಿಚಾರ ತಿಳಿಸಿದರೆ ಆತ್ಮಹತ್ಯೆಗೆ ಮುನ್ನ ಮಡಿಕೇರಿಯ ಟಿವಿ1 ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಡಿವೈಎಸ್‍ಪಿ ಗಣಪತಿ ಮುಂದೆ ನನಗೆ ಏನಾದ್ರೂ ಆದರೆ ಅದಕ್ಕೆ ಮಾಜಿ ಗೃಹ ಸಚಿವ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಎ.ಎಮ್. ಪ್ರಸಾದ್ ಹಾಗೂ ಪ್ರಣಬ್ ಮೊಹಂತಿ ನೇರ ಕಾರಣ ಎಂದು ಒತ್ತಿ ಒತ್ತಿ ಹೇಳಿದ್ದರು. ಆದರೆ ಎಲ್ಲಿಯೂ ಪತ್ನಿಯಿಂದ ನನಗೆ ಕಿರುಕುಳವಾಗಿದೆ ಎಂದು ಹೇಳಿರಲಿಲ್ಲ.
Comments are closed.