ಕರ್ನಾಟಕ

ಹಾವಿನೊಂದಿಗೆ ಹೆಣ್ಣಿನ ರಾತ್ರಿ………….?

Pinterest LinkedIn Tumblr

slept_with_python

ಇತ್ತೀಚಿನ ಎಲ್ಲ ಟಿವಿ ಧಾರಾವಾಹಿಗಳಲ್ಲಿ ನಾಗಿಣಿಯದ್ದೇ ಸದ್ದು ಕೇಳಿ ಬರುತ್ತಿದೆ. ಆದರೆ ನಿಜ ಜೀವನದಲ್ಲೂ ಈ ಹವಾ ಇದ್ದಂತೆ ಕಾಣುತ್ತಿದೆ. ಆದರೆ ಸಣ್ಣ ವ್ಯತ್ಯಾಸವೇನೆಂದರೆ ಇಲ್ಲಿ ಹೆಣ್ಣೇ ನಾಗ ರೂಪ ತಾಳುವುದಿಲ್ಲ. ಹಾವಿನೊಂದಿಗೆ ಸ್ನೇಹದೊಂದಿಗೆ ಇರುವ ಹೆಣ್ಣು ಗಮನ ಸೆಳೆಯುತ್ತಿದ್ದಾಳೆ.

ಈ ಅಮೆರಿಕದ ಮಹಿಳೆ ಬೆಕ್ಕು, ನಾಯಿಗಳಂತೆ ಹೆಬ್ಬಾವನ್ನು ಸಾಕಿಕೊಂಡಿದ್ದು, ಅದರೊಂದಿಗೆ ರಾತ್ರಿ ಮಲಗುತ್ತಾಳೆ. ಆಕೆಯ ಪ್ರೀತಿ ಮತ್ತು ಸ್ನೇಹದಿಂದ ಹಾವೂ ಬದಲಾಗಿದೆಯಂತೆ. ಹಾಗೆಂದು ಆಕೆ ಭಾವಿಸಿದ್ದಳು.

ಆ ಹಾವು ಇದ್ದಕ್ಕಿದ್ದಂತೆ ಊಟ ನಿಲ್ಲಿಸಿತ್ತು. ವೈದ್ಯರ ಬಳಿಗೆ ಹೋದಾಗ ಭಯಂಕರ ಸತ್ಯವೊಂದು ಹೊರಬಿತ್ತು. ಭಾರಿ ಭೋಜನಕ್ಕಾಗಿ ಅದು ಹಸಿದುಕೊಂಡಿತ್ತು ಎಂಬುದನ್ನು ವೈದ್ಯರು ಹೇಳುತ್ತಿದ್ದಂತೆ, ಹಾವನ್ನು ಹೂವಿನಂತೆ ಆಡಿಸಿಕೊಂಡಿದ್ದ ಮಹಿಳೆ ಮೂರ್ಚೆ ಬೀಳುವುದೊಂದು ಬಾಕಿ ಇತ್ತಂತೆ.

Comments are closed.