ಬಳ್ಳಾರಿ : ಸಮಸ್ಯೆ ಪರಿಹಾರಕ್ಕೆಂದು ಕೇಳಿಕೊಂಡ ವೇಳೆ ರಾತ್ರಿ ಮನೆಗೆ ಬಂದು ಮಹಿಳೆಯೊಂದಿಗೆ ವಿಕೃತವಾಗಿ ವರ್ತಿಸಿದ ಕಪಟ ಜ್ಯೋತಿಷಿಯೊಬ್ಬನ ಮೀಸೆ ಬೋಳಿಸಿ, ಸೀರೆ ಉಡಿಸಿ ,ಹೂವು ಮುಡಿಸಿ ಥಳಿಸಿದ ಘಟನೆ ಹೊಸಪೇಟೆಯಲ್ಲಿ ಶನಿವಾರ ನಡೆದಿದೆ.
ನಾಗೇಂದ್ರ ಎಂಬ ಕಪಟ ಜ್ಯೋತಿಷಿ ಮಹಿಳೆಯರಿಂದ ಥಳಿತಕ್ಕೊಳಗಾದವನಾಗಿದ್ದು ,ರಾತ್ರಿ ಮನೆಗೆ ಬಂದು ಮಹಿಳೆಯನ್ನು ಮಂಚಕ್ಕೆ ಕರೆದಿದ್ದ ಎನ್ನಲಾಗಿದೆ. ಈ ವೇಳೆ ನೆರೆಕೆರೆಯ ಮಹಿಳೆಯರು ಸೇರಿ ಈತನನ್ನು ಥಳಿಸಿ ,ಸೀರೆ ಉಡಿಸಿ ,ಕುಪ್ಪಸ ತೋಡಿಸಿ ಮೀಸೆ ಬೋಳಿಸಿದ್ದಾರೆ ಬಳಿಕ ಹೂವು ಮುಡಿಸಿ ವಿಶೇಷ ಉಪಚಾರ ಮಾಡಿದ್ದಾರೆ.
ನಾಗೇಂದ್ರ ಚಿಲಕಟ್ಟಿ ಎಂಬಲ್ಲಿನ ನಿವಾಸಿಯಾಗಿದ್ದುಜ್ಯೋತಿಷ್ಯ ಕೇಳಲು ಬಂದ ಮಹಿಳೆಯರೊಂದಿಗೆ ವಿಕೃತವಾಗಿ ವರ್ತಿಸುವುದಲ್ಲದೆ ವಂಚನೆಯನ್ನೂ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
-ಉದಯವಾಣಿ
Comments are closed.