ಅಂತರಾಷ್ಟ್ರೀಯ

ಯುರೋಪ್‌ನಿಂದ ಬ್ರೆಕ್ಸಿಟ್‌: ಲಂಡನ್ನಿಂದ ಮಲ್ಯ ಎಕ್ಸಿಟ್‌!

Pinterest LinkedIn Tumblr

vijay mallyaಲಂಡನ್‌/ಬೆಂಗಳೂರು: ಅತ್ತ ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ “ಎಕ್ಸಿಟ್‌’ ಬಟನ್‌ ಒತ್ತುತ್ತಿದ್ದಂತೆ, ಕೋಟಿಗಟ್ಟಲೆ ಸಾಲ ಉಳಿಸಿಕೊಂಡು ಭಾರತದಿಂದ ನಿರ್ಗಮಿಸಿಗಿದ್ದ ಮದ್ಯದ ದೊರೆ ವಿಜಯ್‌ ಮಲ್ಯ ಲಂಡನ್ನಿಂದ “ಎಕ್ಸಿಟ್‌’ ಆಗಿದ್ದಾರೆ. ಸದ್ದಿಲ್ಲದೆ ಬೆಂಗಳೂರಿಗೆ ಮರಳಿದ್ದಾರೆ.

ಕರ್ನಾಟಕ ರಾಜಧಾನಿಯ ಹೃದಯ ಭಾಗದಲ್ಲಿರುವ ಯುಬಿ ಸಿಟಿಯ 13ನೇ ಅಂತಸ್ತಿನಲ್ಲಿ ಕುಳಿತು ತಣ್ಣನೆಯ ಹವೆಯಲ್ಲಿ ಬಿಸಿ ಬಿಸಿ ಕಾಫಿ ಹೀರುತ್ತಾ, ಸುಳ್‌ಸುದ್ದಿ ಸಂಸ್ಥೆ ಜತೆ ಮಾತನಾಡಿದ ಮಲ್ಯ, ‘ಭಾರತದಲ್ಲಿನ ಸಾಲದ ಹೊರೆ ಅತಿಯಾಯ್ತೆಂದು ಲಂಡನ್ನಿಗೆ ಹೋಗಿದ್ದೆ. ಈಗ ನೋಡಿದರೆ ಬ್ರೆಕ್ಸಿಟ್‌ನಿಂದಾಗಿ ಬ್ರಿಟನ್‌ ಆರ್ಥಿಕ ಹಿಂಜರಿತ ಅನುಭವಿಸುವ ಭೀತಿ ಇದೆ. ಅಲ್ಲಿ ಬಿಸಿನೆಸ್‌ ಮಾಡಿಕೊಂಡು ಇರುವುದಿರಲಿ, ಒಂದು ಗ್ಲಾಸ್‌ ಬಿಯರ್‌ ಕೂಡ ಸಿಗಲಾರದೇನೋ ಅನ್ನಿಸಿಬಿಟ್ಟಿದೆ. ಅದಕ್ಕಿಂತ ಭಾರತದ ಪರಿಸ್ಥಿತಿಯೇ ಉತ್ತಮ ಎನಿಸಿ ಮರಳಿದ್ದೇನೆ’ ಎಂದರು. ಇದೇ ವೇಳೆ, ಕೋಟಿ ಕೋಟಿ ಸಾಲದ ಹೊರೆ ತೀರಿಸಲು ಯಾವುದಾದರೂ “ಹೊಸ ಸ್ಕೀಂ’ ಹಾಕುವುದಾಗಿಯೂ ಅವರು ಸುಳ್‌ಸುದ್ದಿ ಸಂಸ್ಥೆಗೆ ತಿಳಿಸಿದರು.
-ಉದಯವಾಣಿ

Comments are closed.