
ನೀವು ಕೆಎಫ್‌ಸಿ ಚಿಕನ್ ತಿಂದಿದ್ದೀರೋ ಇಲ್ಲವೋ ಆದರೆ ಅದನ್ನು ಕಟ್ಟಿದ ವ್ಯಕ್ತಿಯ ಯಶಸ್ಸಿನ ಹಿಂದಿನ ಕಥೆ ಕೇಳಿದರೆ ಖಂಡಿತವಾಗಿಯೂ ನಿಬ್ಬೆರಗಾಗುವಿರಿ….
ಬೇರೆ ಬೇರೆ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡ ವ್ಯಕ್ತಿ, 65ನೆ ವರ್ಷದ ನಿವೃತ್ತಿಯ ಬದುಕಿನ ವೇಳೆ ಮತ್ತೆ ಏನಾದರೂ ಮಾಡಬೇಕೆಂದು ಛಲತೊಟ್ಟು 1009 ಬಾರಿ ಪರಾಜಯಗೊಂಡರೂ ಸತತ ಪ್ರಯತ್ನದಿಂದ ಕೆಎಫ್‌ಸಿ(ಕೆಂಟುಕಿ ಫ್ರೈಡ್ ಚಿಕನ್) ಎಂಬ ರೆಸ್ಟೋರೆಂಟ್ ನೆಲೆನಿಲ್ಲಿಸಿದ ಮಹಾನ್ ಸಾಧಕನೆ ಕರ್ನಲ್ ಸ್ಯಾಂಡರ್ಸ್.

1890ರಲ್ಲಿ ಅಮೆರಿಕಾದಲ್ಲಿ ಹುಟ್ಟಿ ಬೆಳೆದ ಕರ್ನಲ್ ಸ್ಯಾಂಡರ್ಸ್, ಎಳೆವಯಸ್ಸಿನಿಂದಲೇ ಎಲ್ಲವನ್ನೂ ಕಳೆೆದುಕೊಂಡು ಬಂದ ನತದೃಷ್ಟನಾಗಿದ್ದ.
ತನ್ನ 5 ನೆ ವಯಸ್ಸನಲ್ಲಿ ತಂದೆಯನ್ನು ಕಳೆದುಕೊಂಡು, 16ನೆ ವಯಸ್ಸಿನಲ್ಲಿ ಶಾಲೆಯನ್ನು ಬಿಟ್ಟು, 17ನೆ ವಯಸ್ಸಿನಲ್ಲಿ ನಾಲ್ಕು ಬಾರಿ ಕೆಲಸವನ್ನು ತ್ಯಜಿಸಿ, 18ನೆ ವಯಸ್ಸಿನಲ್ಲಿ ಮದುವೆಯಾದ. ಬಳಿಕೆ ಸೇನೆಗೆ ಸೇರಿ ಅಲ್ಲಿಂದಲೂ ಹೊರಬಂದು, ಬಳಿಕ ಕಾನೂನು ಶಾಲೆ ಸೇರಲು ಮುಂದಾದಾಗ ಅಲ್ಲಿಯೂ ವಿಫಲವಾಗಿ, ಮತ್ತೆ ಬೇರೆ ಕೆಲಸಕ್ಕೆ ಮುಂದಾದರೂ, ಅಲ್ಲಿಯೂ ಹೆಚ್ಚುಕಾಲ ಬಾಳಲಿಲ್ಲ.

ಓರ್ವ ಪುತ್ರಿಯ ತಂದೆಯಾದ ಬಳಿಕ ಬೇರೆ ಉದ್ಯಮ ಕೂಡಾ ಅವರ ಕೈ ಹಿಡಿಯಲಿಲ್ಲ. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಕರ್ನಲ್ ಸ್ಯಾಂಡರ್ಸ್, ತಾನು ಸಾಧಿಸಲು ಇನ್ನೂ ತುಂಬಾ ಇದೆ ಎಂದು ಅರಿತು ಮುಂದೆ ಸತತ ಪ್ರಯತ್ನದ ಫಲವಾಗಿ ಕೆಎಫ್‌ಸಿ(ಕೆಂಟುಕಿ ಫ್ರೈಡ್ ಚಿಕನ್) ಎಂಬ ರೆಸ್ಟೋರೆಂಟ್ ಕಟ್ಟಿ ಉತ್ತುಂಗಕ್ಕೇರಿದ.

ತಾನು ಕಷ್ಟಪಟ್ಟು ಬೆಳೆಸಿದ್ದ ಉದ್ಯಮವೊಂದು ಕಾರಣಾಂತರದಿಂದ ನಿಂತಾಗ, ಕರ್ನಲ್ ಸ್ಯಾಂಡರ್ಸ್ ಕೈಯಲ್ಲಿ ಏನೂ ಇರಲಿಲ್ಲ. ಆಗ ಅವರಿಗೆ 65 ವರ್ಷ ವಯಸ್ಸು. ನಿವೃತ್ತಿ ಹೊಂದಿದ್ದ ಬದುಕಿನಲ್ಲಿ ಅವರು ಎಂದೂ ಛಲವನ್ನು ಬಿಟ್ಟಿರಲಿಲ್ಲ. ಚಿಕನ್ ಖಾದ್ಯಗಳನ್ನು ತಯಾರಿಸುವ ಬಗ್ಗೆ ಅವರಿಗೆ ಅತೀವವಾದ ಒಲವು ಇತ್ತು. ಅದನ್ನೆ ಬಂಡವಾಳವನ್ನಾಗಿಟ್ಟುಕೊಂಡು ಚಿಕನ್ ರೆಸಿಪಿಗಳನ್ನು ಪ್ರಯೋಗ ಮಾಡಲು ಆರಂಭಿಸಿದರು. ನೂರಾರು ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ ತನ್ನ ಚಿಕನ್ ರೆಸಿಪಿಗಳ ಬಗ್ಗೆ ಮಾರ್ಕೆಟಿಂಗ್ ಮಾಡಿದರೂ, ಅದೃಷ್ಟ ಅವರಿಗೆ ಸಾಥ್ ನೀಡಲಿಲ್ಲ. ಅಲ್ಲಿಯೂ ವಿಫಲರಾದರು.
ಆದರೆ ಕರ್ನಲ್ ಸ್ಯಾಂಡರ್ಸ್ ಸೋಲನ್ನು ಒಪ್ಪಲಿಲ್ಲ. 65ನೆ ವಯಸ್ಸಿನಲ್ಲಿ 1009 ಬಾರಿ ಉದ್ಯಮವನ್ನು ನೆಲೆನಿಲ್ಲಿಸಲು ಶ್ರಮಪಟ್ಟರೂ, ಅದು ಫಲ ನೀಡಲಿಲ್ಲ. ಆದರೆ ಕರ್ನಲ್ ಸ್ಯಾಂಡರ್ಸ್ ಸೋಲನ್ನು ಮಾತ್ರ ಒಪ್ಪುವವರಾಗಿರಲಿಲ್ಲ. ಕಠಿಣ ಪರಿಶ್ರಮ, ಛಲವನ್ನು ಬಿಡದೆ ಕೆಎಫ್‌ಸಿ(ಕೆಂಟುಕಿ ಫ್ರೈಡ್ ಚಿಕನ್) ರೆಸ್ಟೋರೆಂಟ್‌ನ್ನು ಕಟ್ಟಿ ಬೆಳೆಸಿದರು.

ಈವತ್ತು ಪ್ರಪಂಚದ 120 ದೇಶಗಳಲ್ಲಿ 18,000ಕ್ಕೂ ಅಧಿಕ ಕೆಎಫ್‌ಸಿ(ಕೆಂಟುಕಿ ಫ್ರೈಡ್ ಚಿಕನ್)ರೆಸ್ಟೋರೆಂಟ್ ಗಳಿದ್ದು, ಕೋಟಿಗಟ್ಟಲೆಯ ವ್ಯವಹಾರ ನಡೆಸುತ್ತಿವೆ.
ಒಂದು ವೇಳೆ ಕರ್ನಲ್ ಸ್ಯಾಂಡರ್ಸ್ ತನ್ನ ಮುದಿ ವಯಸ್ಸಿನಲ್ಲಿ ಎಲ್ಲರಂತೆ ಸುಮ್ಮನೆ ಕೂರುತ್ತಿದ್ದರೆ ಇಂದು ಕೆಎಫ್‌ಸಿ(ಕೆಂಟುಕಿ ಫ್ರೈಡ್ ಚಿಕನ್) ಎಂಬ ರೆಸ್ಟೋರೆಂಟ್ ಇಷ್ಟೋಂದು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರಲಿಲ್ಲ. ಕರ್ನಲ್ ಸ್ಯಾಂಡರ್ಸ್ ನ ಕಠಿಣ ಶ್ರಮ, ಛಲದ ಪ್ರತೀಕವಾಗಿ ಇಂದು ಕೆಎಫ್‌ಸಿ ನಿಂತಿದೆ.
Comments are closed.