ಕರ್ನಾಟಕ

ನಟಿ ರಮ್ಯಾ ರಾಜಕೀಯ ಓಟಕ್ಕೆ ಬ್ರೇಕ್ ಹಾಕಿದ ಅಂಬರೀಶ್ ! ಹೈಕಮಾಂಡ್ ಮುಂದೆ ಇಟ್ಟ ಷರತ್ತು ಇಲ್ಲಿದೆ….

Pinterest LinkedIn Tumblr

ambi-ramya

ಬೆಂಗಳೂರು: ಸಂಪುಟ ಪುನಾರಚನೆ ಮಾಡಿ ಕೈ ಸುಟ್ಟುಕೊಂಡು ವಿಲವಿಲ ಒದ್ದಾಡ್ತಿದ್ದ ಸಿಎಂ ಸಿದ್ದರಾಮಯ್ಯಗೆ ಕೊನೆಗೂ ರಿಲೀಫ್ ಸಿಕ್ಕಿದೆ. ಇತ್ತ ರೆಬೆಲ್‍ಸ್ಟಾರ್ ಅಂಬರೀಶ್ ಹೈಕಮಾಂಡ್ ಮುಂದೆ ಷರತ್ತುಗಳಿನ್ನಿಟ್ಟಿದ್ದು, ರಮ್ಯಾ ಅವರ ರಾಜಕೀಯ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದಾರೆ.

ಹೌದು. ಎರಡು ಬೇಡಿಕೆಗಳನ್ನು ಮುಂದಿಟ್ಟಿದ್ದ ಅಂಬರೀಶ್, ವಿಧಾನ ಪರಿಷತ್‍ಗೆ ಮಾಜಿ ಸಂಸದೆ ರಮ್ಯಾ ಅವರನ್ನು ನಾಮ ನಿರ್ದೇಶನ ಮಾಡಬಾರದು ಎಂದು ಹೇಳಿದ್ದರು. ಸದ್ಯ ಶಾಸಕರ ಎರಡೂ ಬೇಡಿಕೆಗಳಿಗೂ ಹೈಕಮಾಂಡ್ ಅಸ್ತು ಎಂದಿದ್ದು, ಈ ಮೂಲಕ ಒಂದು ವಾರದಿಂದ ನಡೆಯುತ್ತಿದ್ದ ಬಂಡಾಯ ಶಾಸಕರ ಪ್ರತಿಭಟನೆ ಶಮನವಾಗಿದೆ.

ಆದ್ರೆ ಚಿತ್ರರಂಗದಿಂದ ಬೆಳೆದು ಬಂದು ರಾಜಕೀಯದಲ್ಲಿ ನೆಲೆಯೂರೋದು ತುಂಬ ಕಷ್ಟ. ಅಂತದ್ರಲ್ಲಿ ರಮ್ಯಾ ಬೆಳವಣಿಗೆಗೆ ಅಂಬರೀಶ್ ಅಡ್ಡಗಾಲು ಹಾಕೋದು ಎಷ್ಟು ಸರಿ ಅನ್ನೋ ಎಂಬ ಪ್ರಶ್ನೆಗಳು ಶುರುವಾಗಿದೆ.

Comments are closed.