ಬೆಂಗಳೂರು, ಜೂ.೨೪: -ನಾಲ್ಕನೇ ಮದುವೆಗೆ ಹಸೆಮಣೆ ಎರಲು ಸಿದ್ದನಾಗಿದ್ದ ಚಪಲಚನ್ನಿಗರಾಯನೊಬ್ಬ ನಾಗರಬಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ಸಿಕ್ಕಿದೇ ತಡ ಐದನೆ ಪ್ರೇಯಸಿಯೊಬ್ಬಳು ೩ನೇ ಪತ್ನಿಯವರ ಕಡೆ ಸೇರಿ ಹಿಗ್ಗಾಮುಗ್ಗಾ ಥಳಿಸಿ ತಕ್ಕ ಶಾಸ್ತಿ ಮಾಡಿದ್ದಾರೆ.
ಗಾಯಗೊಂಡಿರುವ ವಿವಾಹ ಶೂರ ವಜ್ರೇಶ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ವಜ್ರೇಶ್ ಮೊದಲ ಪತ್ನಿಗೆ ವಿಚ್ಛೇಧನ ನೀಡಿ ೨ ನೇ ಮದುವೆಯಾಗಿದ್ದ ಬಳಿಕ ಆಕೆಯನ್ನು ತ್ಯಜಿಸಿ ೩ನೇ ಮದುವೆಯಾಗಿದ್ದನು.
ಮೂರನೇ ಪತ್ನಿಯನ್ನು ಬಿಟ್ಟು ಇದೀಗ ನಾಲ್ಕನೇ ಮದುವೆಗೆ ಸಿದ್ಧನಾಗಿದ್ದ. ಇದರ ಜೊತೆ ಐದನೇ ಪೇಯಸಿ ಕೂಡ ಆತನಿಗಿದ್ದಳು. ನಾಲ್ಕನೇ ಮದುವೆ ವಿಷಯ ಗೊತ್ತಾಗಿ ಆತ ನಾಗರಬಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ಇರುವ ತಿಳಿದು ಧಾವಿಸಿದ ೫ನೇ ಪೇಯಸಿ ಮೂರನೇ ಪತ್ನಿ ಹಾಗೂ ಆಕೆಯ ಕಡೆಯವರೊಂದಿಗೆ ಸೇರಿ ಆತನಿಗೆ ಹಿಗ್ಗಾಮುಗ್ಗಾ ಥಳಿಸಿ ಧರ್ಮದೇಟು ನೀಡಿದ್ದಾರೆ.
ವಜ್ರೇಶ್ ವಂಚನೆ ವಿಚಾರವನ್ನು ಪ್ರಶ್ನಿಸಲು ೧೫ ದಿನಗಳ ಹಿಂದೆ ಮನೆಗೆ ತೆರಳಿದ್ದ ೩ ನೇ ಪತ್ನಿಯ ಮೇಲೆ ನಾಯಿ ಬಿಟ್ಟು ಅದರಿಂದ ಕಚ್ಚಿಸಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ತಲಘಟ್ಟಪುರ ಪೊಲೀಸರಿಗೆ ದೂರನ್ನು ನೀಡಲಾಗಿತ್ತು.
ಸದ್ಯ ವಜ್ರೇಶ್‌ನನ್ನು ತಲಘಟ್ಟಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Comments are closed.