
ಬೆಂಗಳೂರು, ಜೂ. ೨೪- ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವ ಬದಲಾವಣೆಗೆ ಒತ್ತಾಯಿಸಿ ಅತೃಪ್ತ ಶಾಸಕರು ನಡೆಸುತ್ತಿರುವ ಹೋರಾಟ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮಾಜಿ ಸಚಿವ, ಹಿರಿಯ ಶಾಸಕ ವಿ. ಶ್ರೀನಿವಾಸ್ ಪ್ರಸಾದ್ ಅವಪ್ರಧಾನ ಸುದ್ದಿ ಸಂತ್ರಸ್ತರ ಸಂಗ್ರಾಮ : ಭಿನ್ನಮತೀಯರ ಮುಂದಿನ ಹೋರಾಟಕ್ಕೆ ಚಿಂತನೆರ ನೇತೃತ್ವದಲ್ಲಿ ಇಂದೂ ಸಚಿವ ಸ್ಥಾನ ಕಳೆದುಕೊಂಡಿರುವ ಹಾಗೂ ಸಚಿವ ಸ್ಥಾನ ಸಿಗದೆ ಹತಾಶರಾಗಿರುವ ಶಾಸಕರು ಸಭೆ ಸೇರಿ ಮುಂದಿನ ನಡೆ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಸಚಿವ ಸ್ಥಾನ ಕಳೆದುಕೊಂಡಿರುವ ಮತ್ತೊಬ್ಬ ಹಿರಿಯ ಸಚಿವ ಖಮರುಲ್ ಇಸ್ಲಾಂ ನಿವಾಸದಲ್ಲಿಂದು ಶ್ರೀನಿವಾಸ್ ಪ್ರಸಾದ್ ಸೇರಿದಂತೆ ಹಲವು ಶಾಸಕರು ಸಭೆ ಸೇರಿ ನಾಯಕತ್ವ ಬದಲಾವಣೆ ಮಾಡಬೇಕೆಂಬ ವಿಚಾರದಲ್ಲಿ ತಮ್ಮ ನಿಲುವು ಬದಲಿಸಲಿದರಲು ನಿರ್ಧರಿಸಿದರು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ತೀರ್ಮಾನಿಸಿದರು.
ಭಾನುವಾರ ಸುಮಾರು 30 ರಿಂದ 40 ಶಾಸಕರು ಒಂದೆಡೆ ಸಭೆ ಸೇರಲು ನಿರ್ಧರಿಸಿದ್ದು, ಪಕ್ಷ ಮತ್ತು ಸರಕಾರದ ವರ್ಚಸ್ಸು ಹೆಚ್ಚಿಸುವ ಏಕೈಕ ಉದ್ದೇಶದಿಂದ ಹೋರಾಟವನ್ನು ತೀವ್ರಗೊಳಿಸುವ ನಿರ್ಣಯ ಕೈಗೊಳ್ಳಲಿದ್ದಾರೆ. ಅತೃಪ್ತ ಶಾಸಕರ ಹೋರಾಟಕ್ಕೆ ಕಾಂಗ್ರೆಸ್‌ನ ಮುತ್ಸದ್ಧಿ ನಾಯಕ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಪರೋಕ್ಷ ಬೆಂಬಲವೂ ಇದೆ ಎನ್ನಲಾಗಿದೆ.
ನಾಯಕತ್ವ ಬದಲಾವಣೆಯಾದರೆ ಮಾತ್ರವೇ ಪಕ್ಷ ಉಳಿಯಲು ಸಾಧ್ಯ. ಮುಂಬರುವ ವಿಧಾನಸಭಾ ಚುನಾವಣೆಗೆ
ಸಿದ್ದರಾಮಯ್ಯ ನೇತೃತ್ವದಲ್ಲಿ ಹೋದರೆ ಮತ್ತೆ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಸುವ ಪ್ರಯತ್ನ ಸಿದ್ದರಾಮಯ್ಯ ಅವರಿಂದ ಆಗದಿರುವ ಕಾರಣ ಅವರ ನಾಯಕತ್ವ ಬದಲಾವಣೆಯಾಗಬೇಕು ಎಂದು ಶಾಸಕರು ಇಂದಿನ ಸಭೆಯಲ್ಲಿ ಒಕ್ಕೊರಲಿನ ನಿರ್ಧಾರ ಕೈಗೊಂಡರು.
ಅಗತ್ಯವೆನಿಸಿದರೆ ದೆಹಲಿಗೆ ತೆರಳಿ ಹೈಕಮಾಂಡ್ ಮೇಲೆ ಒತ್ತಡ ಹೇರಲೂ ಶಾಸಕರು ನಿರ್ಧರಿಸಿದ್ದಾರೆ. ಸಚಿವ ಸ್ಥಾನ ವಂಚಿತ ಹಿರಿಯ ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರೂ ಈ ಹೋರಾಟಕ್ಕೆ ಸಾಥ್ ನೀಡಿದ್ದು, ಅವರ ಸಾಮರ್ಥ್ಯಕ್ಕನುಗುಣವಾಗಿ ಅತೃಪ್ತ ಶಾಸಕರನ್ನು ಗುಂಪು ಸೇರಿಸುವ ಪ್ರಯತ್ನದಲ್ಲಿದ್ದು, ಭಾನುವಾರ ನಡೆಯಲಿರುವ ಸಭೆಗೆ 30 ರಿಂದ 40 ಶಾಸಕರನ್ನು ಆಹ್ವಾನಿಸಲು ತಯಾರಿ ನಡೆಸುತ್ತಿದ್ದಾರೆ.
ಅತೃಪ್ತರ ಹೋರಾಟಕ್ಕೆ ಹಿರಿಯ ನಾಯಕರಾದ ಜಾಫರ್ ಷರೀಫ್, ಬಿ.ಕೆ ಹರಿಪ್ರಸಾದ್ ಮುಂತಾದವರ ಪರೋಕ್ಷ ಬೆಂಬಲವೂ ಇರುವುದು ಶಾಸಕರಲ್ಲಿ ಹೊಸ ಚೈತನ್ಯ ಮೂಡಿಸಿದೆ.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅತೃಪ್ತ ಶಾಸಕರನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿದ್ದಾರೆ. ಇಂದು ಬೆಳಿಗ್ಗೆ ತಮ್ಮ ನಿವಾಸ ಕಾವೇರಿಯಲ್ಲಿ ಸಂಪುಟದ ಸಹೋದ್ಯೋಗಿಗಳಿಗೆ ಉಪಾಹಾರ ಕೂಟ ಏರ್ಪಡಿಸಿ ಅತೃಪ್ತ
ಶಾಸಕರನ್ನು ಮನವೊಲಿಸುವ ಸಂಬಂಧ ಹಿರಿಯ ಸಚಿವರು ಮುಂದಾಗಬೇಕೆಂದು ಸೂಚಿಸಿದರು.
ಹಿರಿಯ ಸಚಿವರಾದ ಕಾಗೋಡು ತಿಮ್ಮಪ್ಪ, ಬಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ ಸೇರಿದಂತೆ ಬಹುತೇಕ ಸಚಿವರು ಸಭೆಯಲ್ಲಿ ಪಾಲ್ಗೊಂಡಿದ್ದರು.
Comments are closed.