
ಬೆಂಗಳೂರು: ದೇವರಿಗೆ ಹೂವಿನ ಅಲಂಕಾರ, ಹಣ್ಣು, ತರಕಾರಿ, ಎಲೆ ಅಲಂಕಾರ ಹೀಗೆ ತರಹೇವಾರಿ ಅಲಂಕಾರ ಮಾಡುವುದನ್ನು ನೋಡಿದ್ದೇವೆ. ಆದ್ರೆ ಇಲ್ಲೊಂದು ದೇವಸ್ಥಾನದ ದೇವಿಗೆ ಚಾಕ್ಲೆಟ್ ಅಂದ್ರೆ ಬಲು ಪ್ರೀತಿಯಂತೆ. ಹೀಗಾಗಿ ಚಾಕ್ಲೆಟ್ ಅಲಂಕಾರ ಮಾಡಿದ್ದಾರೆ.
ಕೀರಿಟದಲ್ಲಿ ಕಲರ್ ಕಲರ್ ಚಾಕ್ಲೆಟ್. ದೇವಿ ಧರಿಸಿರೋ ಒಡವೆಗಳೂ ಚಾಕ್ಲೆಟ್‍ನಲ್ಲೇ ತಯಾರಿಸಿದ್ದು. ಅಷ್ಟೇ ಯಾಕೆ ಈ ದೇವಿ ಕುಳಿತಿರೋ ಇಡೀ ಮಂಟಪವೇ ಕಲರ್‍ಫುಲ್ ಚಾಕ್ಲೆಟ್‍ನಲ್ಲಿ ಕಂಗೊಳಿಸ್ತಿದೆ. ಈ ಚಾಕ್ಲೆಟ್ ಪ್ರಿಯ ದೇವರಿರೋದು ಬೆಂಗಳೂರಿನ ಭಾರತೀ ನಗರದ ಅದಿಪರಾಶಕ್ತಿ ದೇವಾಲಯದಲ್ಲಿ.
ಈ ದೇವಸ್ಥಾನವದವರು ಕಳೆದ 20 ವರ್ಷಗಳಿಂದ ಇದೇ ರೀತಿ ಚಾಕ್ಲೆಟ್ ಅಲಂಕಾರ ಮಾಡಿಕೊಂಡು ಬರ್ತಿದ್ದಾರೆ. ದೇವಿಯ ಸೀರೆ, ಬಳೆ, ಆಭರಣ ಎಲ್ಲವನ್ನೂ ಚಾಕ್ಲೆಟ್‍ನಿಂದಲೇ ಮಾಡಲಾಗುತ್ತೆ. ಈ ಅಲಂಕಾರಕ್ಕಾಗಿ ದೇಶ-ವಿದೇಶದ ಸುಮಾರು 20 ಸಾವಿರಕ್ಕೂ ಹೆಚ್ಚು ಚಾಕೋಲೇಟ್‍ಗಳನ್ನ ಬಳಸಲಾಗಿದೆ. ಗುರುಜಯಂತಿಯ ಪ್ರಯುಕ್ತ ಭಕ್ತರು ತಂದು ಕೊಟ್ಟ ಚಾಕೊಲೇಟ್‍ನಿಂದ ಅಲಂಕಾರ ಮಾಡಿದ್ದಾರೆ. ಈ ವಿಶಿಷ್ಟ ಅಲಂಕಾರದ ದೇವಿಯನ್ನ ನೋಡಲು ಸಾವಿರಾರು ಭಕ್ತರು ಬರ್ತಿದ್ದಾರೆ.
ದೇವಿಯ ಮತ್ತೊಂದು ಮಹಿಮೆ ಅಂದ್ರೆ ಅಲಂಕಾರಕ್ಕಾಗಿ ಬಳಸಿರೋ ಚಾಲೋಲೇಟ್‍ಗಳು ಕರಗುವುದಿಲ್ವಂತೆ. ಇದು ದೇವಿಯ ಪವಾಡ ಆಂತಾರೆ ಭಕ್ತರು. ಸುಮಾರು 30 ದಿನಗಳ ಕಾಲ ಅಲಂಕಾರ ಇರುತ್ತೆ.
Comments are closed.