ಕರ್ನಾಟಕ

ಸಾವಯವ ಆಹಾರ ಪದಾರ್ಥ ಬೆಳೆಸಲು ಸಲಹೆ

Pinterest LinkedIn Tumblr

savaಬೆಂಗಳೂರು, ಜೂ. ೪- ಸಾವಯವ ಆಹಾರ ಪದಾರ್ಥಗಳನ್ನು ಉಪಯೋಗಿಸುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಚಿತ್ರನಟಿ ಹಾಗೂ ಗಾಯಕಿ ವಸುಂಧರಾ ದಾಸ್ ಇಂದು ಇಲ್ಲಿ ಹೇಳಿದರು.
ಸಾವಯವ ಆಹಾರಗಳನ್ನು ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಉತ್ಪಾದಿಸುವುದರಿಂದ ಅದು ಆರೋಗ್ಯದ ಮೇಲಾಗುವ ಪರಿಣಾಮವನ್ನು ಕಡಿಮೆ ಮಾಡಲಿದೆ. ಜನರು ಹೆಚ್ಚಾಗಿ ಸಾವಯವ ಆಹಾರ ಪದಾರ್ಥಗಳತ್ತ ಗಮನ ಹರಿಸುವುದು ಒಳಿತು ಎಂದು ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಹಸಿರು ತೋಟದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಸಿರಿಧಾನ್ಯ ಹಾಗೂ ಮಾವು ಮೇಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರೋಗ್ಯಕ್ಕೆ ಪೂರಕವಾಗುವ ಸಾವಯವ ಆಹಾರ ಪದಾರ್ಥಗಳ ಕ‌ಡೆ ಗಮನ ಹರಿಸಬೇಕು ಎಂದು ಹೇಳಿದರು.
ಶಾಸಕ ಅಶ್ವತ್ ನಾರಾಯಣ ಮಾತನಾಡಿ, ರಾಸಾಯನಿಕ ಗೊಬ್ಬರ ಬಳಸದೆ ಉತ್ಪಾದಿಸುವ ಸಾವಯವ ಆಹಾರ ಪದಾರ್ಥಗಳ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ಸಿರಿಧಾನ್ಯ ಮೇಳವನ್ನು ಹಸಿರು ತೋಟ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಯವ ರೈತರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದರು.

Comments are closed.