ಕರ್ನಾಟಕ

ಪೊಲೀಸರ ರೊಚ್ಚು-ಮೇಲಾಧಿಕಾರಿಗಳ ಕೆಚ್ಚು

Pinterest LinkedIn Tumblr

policeಬೆಂಗಳೂರು, ಜೂ. ೨- ಇಂದು ಸರ್ಕಾರಿ ನೌಕರರು ಮುಷ್ಕರ ನಡೆಸಿರುವ ಬೆನ್ನಲ್ಲೆ ಈ ತಿಂಗಳ 4 ರಂದು ಪೊಲೀಸರು ಇದೇ ಮೊದಲ ಬಾರಿಗೆ ಸಾಮೂಹಿಕ ರಜೆ ಹಾಕುವ ಮೂಲಕ ತಮ್ಮ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಮುಂದಾಗಿರುವುದು ಬೂದಿ ಮುಚ್ಚಿದ ಕೆಂಡದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ನಾ ಕೊಡೆ ನೀ ಬಿಡೆ ಎಂಬಂತೆ ಸರ್ಕಾರ ಪ್ರತಿಭಟನೆ ನಡೆಸುವ ಪೊಲೀಸರ ವಿರುದ್ಧ ಎಸ್ಮಾ ಕಾಯಿದೆ ಜಾರಿ ಮಾಡುವುದಾಗಿ ಹೇಳಿದ್ದರೂ ಪೊಲೀಸರು ಆ ಬಗ್ಗೆ ಕಿಂಚಿತ್ತು ಗಮನ ಕೊಡದೆ ಸಾಮೂಹಿಕ ರಜೆ ಹಾಕಿಯೇ ತೀರುತ್ತೇವೆ ಎಂಬ ಮನಸ್ಥಿತಿಗೆ ಬಂದಿದ್ದಾರೆ.
ಪೊಲೀಸರ ಈ ಮನಸ್ಥಿತಿ ಮೇಲಾಧಿಕಾರಿಗಳಲ್ಲಿ ಮತ್ತಷ್ಟು ಕೆಚ್ಚು ಹೆಚ್ಚಿಸಿದ್ದು, ಶತಾಯ-ಗತಾಯ ಪೊಲೀಸರ ಪ್ರತಿಭಟನೆಯನ್ನು ಹತ್ತಿಕ್ಕುವ ಎಲ್ಲ ಪ್ರಯತ್ನಗಳು ನಡೆದೇ ಇವೆ. ಪೊಲೀಸರ ಸಮಸ್ಯೆಗಳು ಸಾಕಷ್ಟಿವೆ. ಆ ಬಗ್ಗೆ ಇದುವರೆಗೂ ಯಾರು ಗಮನ ಹರಿಸಿಲ್ಲ. ಎಲ್ಲ ಸರ್ಕಾರಗಳು ಪೊಲೀಸರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಲೇ ಬಂದಿವೆ. ಹಾಗಾಗಿ, ರೋಸಿ ಹೋಗಿರುವ ಪೊಲೀಸರು ಪ್ರತಿಭಟನೆಯ ಹಾದಿಗೆ ಇಳಿದಿದ್ದಾರೆ.
ಪೊಲೀಸರ ಈ ಪ್ರತಿಭಟನೆ ಯಶಸ್ವಿಯಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ. ಶತಾಯ-ಗತಾಯ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪೊಲೀಸರು ಪ್ರತಿಭಟನೆ ನಡೆಸುವ ಗಟ್ಟಿ ತೀರ್ಮಾನಕ್ಕೆ ಬಂದಿದ್ದರೆ, ಇದಕ್ಕೆ ಪ್ರತಿಯಾಗಿ ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ಯಾವ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಆ ಕ್ರಮಗಳನ್ನೆಲ್ಲ ಜಾರಿಗೊಳಿಸಿವೆ.

ಈ ತಿಂಗಳ 4 ರಂದು ಪೊಲೀಸರು ಪ್ರತಿಭಟನೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟಿನಲ್ಲಿ ವಕೀಲರಾದ ಅಮೃತೇಶ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿ, ನ್ಯಾಯಾಲಯದ ಮಧ್ಯ ಪ್ರವೇಶಕ್ಕೆ ಮನವಿ ಮಾಡಿದ್ದಾರೆ ಪೊಲೀಸ್ ಇಲಾಖೆಯಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಪೊಲೀಸರು ತಮ್ಮ ಹಕ್ಕುಗಲಿಗೆ ಹೋರಾಟ ನಡೆಸಲು ಮುಂದಾಗಿದ್ದಾರೆ. ಅವರು ಪ್ರತಿಭಟನೆಗೆ ಇಳಿದರೆ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಲಿದೆ. ಸರ್ಕಾರ ನೊಂದ ಪೊಲೀಸರನ್ನು ಕರೆಸಿ ಮಾತುಕತೆಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಆದರೆ ಪೊಲೀಸರನ್ನು ಪ್ರತಿಭಟನೆಗಿಳಿಯದಂತೆ ಬೆದರಿಸಲಾಗಿದೆ. ಹಾಗಾಗಿ ನ್ಯಾಯಾಲಯ ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸಬೇಕು ಮಾತುಕತೆಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ವಕೀಲ ಅಮೃತೇಶ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

Comments are closed.