ಕರ್ನಾಟಕ

ಬೇಬಿ ಕೇರ್‌ ಸೆಂಟರ್‌ ಮಾಲೀಕನಿಂದ ಲೈಂಗಿಕ ದೌರ್ಜನ್ಯ

Pinterest LinkedIn Tumblr

child-rape-12-revised-e1463139686312ಬೆಂಗಳೂರು: ಬೇಬಿ ಕೇರ್‌ ಸೆಂಟರ್‌ನ ಮಾಲೀಕನೊಬ್ಬ 3 ವರ್ಷದ ಹೆಣ್ಣು ಮಗುವಿನ ಮೇಲೆ ಲೈಂಗಿಕ ವಿಕೃತಿ ಮೆರೆದ ನೀಚ ಕೃತ್ಯ ಜೆಜೆ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಗುವನ್ನು ಮಧ್ಯಾಹ್ನ ಬೇಬಿ ಕೇರ್‌ ಸೆಂಟರ್‌ ಗೆ ಬಿಟ್ಟು ಸಂಜೆ ಮನಗೆ ವಾಪಾಸ್‌ ಕರೆದೊಯ್ದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಪೋಷಕರು ಮಗುವನ್ನು ವೈದ್ಯರ ಬಳಿಗೆ ಕರೆದೊಯ್ದ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಲೈಂಗಿಕ ದೌರ್ಜನ್ಯ ಎಸಗಿರುವುದು ತಿಳಿದುಬಂದಿದೆ.

ಕೂಡಲೇ ಪೊಲೀಸರಿಗೆ ದೂರು ನೀಡಲಾಗಿದ್ದು, ದೂರಿನನ್ವಯ ಬೇಬಿ ಕೇರ್‌ ಮಾಲಿಕ ಚಂದು ಎಂಬಾತನನ್ನು ಬಂಧಿಸಿದ್ದಾರೆ.

Write A Comment