ಕರ್ನಾಟಕ

ಕೆಪಿಸಿಸಿ ಅಧ್ಯಕ್ಷ ಪೀಠಕ್ಕೆ ರಾಜಣ್ಣ ಆಕಾಂಕ್ಷಿ

Pinterest LinkedIn Tumblr

kppccತುಮಕೂರು, ಏ. ೯- ನಾನು ಸಹ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಮಧುಗಿರಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಇಂದಿಲ್ಲಿ ಹೇಳಿದರು.
ನಗರದ ಡಿಸಿಸಿ ಬ್ಯಾಂಕ್ ಕಚೇರಿ ಸಭಾಂಗಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯವರು ಒಂದು ಬಾರಿ ಕೆಪಿಸಿಸಿ
ಅಧ್ಯಕ್ಷರಾದರೆ ಮತ್ತೊಂದು ಅವಧಿಗೆ ನಮ್ಮ ಜಿಲ್ಲೆಯವರಿಗೆ ಅಧ್ಯಕ್ಷ ಸ್ಥಾನ ಕೊಡಬಾರದೆಂಬ ನಿಯಮವೇನಾದರೂ ಇದೆಯಾ ಎಂದು ಪ್ರಶ್ನಿಸಿ, ನಾನು ಸಹ ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಎಂದು ಪುನರುಚ್ಚರಿಸಿದರು.
ಸಚಿವ ಡಿ.ಕೆ. ಶಿವಕುಮಾರ್ ರವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಅದಕ್ಕೆ ತಮ್ಮ ಸಹಕಾರವೂ ಇದೆ. ಅವರಿಗೆ ಪಕ್ಷ ಸಂಘಟನೆ ಮಾಡುವ ಶಕ್ತಿ ಇದೆ ಎಂದರು.
ಸಮಾನ ಮನಸ್ಕ ಶಾಸಕರ ಸಭೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿಂದು ಸಂಜೆ ಸಮಾನ ಮನಸ್ಕ ಶಾಸಕರ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ ನಾವೆಲ್ಲಾ ಪಾಲ್ಗೊಳ್ಳುತ್ತಿದ್ದು, ಸಚಿವ ಸಂಪುಟ ಪುನರ್ ರಚಿಸಬೇಕೆಂಬುದು ಸಮಾನ ಮನಸ್ಕ ಶಾಸಕರೆಲ್ಲಾ ಒತ್ತಾಯಿಸುತ್ತೇವೆ ಎಂದ ಅವರು, ಸಚಿವ ಸಂಪುಟದಲ್ಲಿ ತಮಗೂ ಸಚಿವ ಸ್ಥಾನ ಕೊಡಬೇಕೆಂದು ಬೆಂಬಲಿಗರು ಮುಖ್ಯಮಂತ್ರಿಗಳನ್ನು ಕೇಳುತ್ತಾರೆ ಎಂದರು.
ತಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವಾಗಲೀ, ಸಚಿವ ಸ್ಥಾನವಾಗಲೀ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸಲು ನಾನು ಸಿದ್ದ ಎಂದರು.

Write A Comment