ಕರ್ನಾಟಕ

ಕ್ರಿಕೆಟ್ ಮೇಯರ್ ತಂಡಕ್ಕೆ ಜಯ

Pinterest LinkedIn Tumblr

cri-newಬೆಂಗಳೂರು, ಏ. ೯- ಮೇಯರ್ ಮತ್ತು ಆಯುಕ್ತರ ನಡುವಣ ಕ್ರಿಕೆಟ್ ಪಂದ್ಯದಲ್ಲಿ ಮೇಯರ್ ತಂಡ ೯ ವಿಕೆಟ್‌ಗಳ ಗೆಲುವು ಪಡೆದಿದೆ.
ಗೋವಿಂದರಾಜನಗರ ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ ಅವರ ಆಕರ್ಷಕ ೫೨ ರನ್‌ಗಳನ್ನು ಗಳಿಸಿದರು.
ಮೇಯರ್ ತಂಡ ಮೊದಲು ಬ್ಯಾಟಿಂಗ್ ಆರಂಭಿಸಿ ವಿಶೇಷ ಆಯುಕ್ತ ರವಿಶಂಕರ್ ೨೨ ರನ್ ಹಾಗೂ ಕಾರ್ಯಪಾಲಕ ಅಭಿಯಂತರ ರಾಕೇಶ್ ೨೪ ರನ್‌ಗಳನ್ನು ಗಳಿಸಿ ೧೦೬ ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು.
೧೦೬ ರನ್‌ಗಳ ಮೊತ್ತವನ್ನು ಬೆನ್ನತ್ತಿದ ಮೇಯರ್ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೧೦೮ ರನ್‌ಗಳನ್ನು ಗಳಿಸಿತು. ಮೇಯರ್ ತಂಡದ ಪರವಾಗಿ ಉಮೇಶ್ ಶೆಟ್ಟಿ ಆಕರ್ಷಕ ಆರು ಸಿಕ್ಸರ್‌ಗಳು, ನಾಲ್ಕು ಬೌಂಡರಿಗಳನ್ನು ಬಾರಿಸುವ ಮೂಲಕ ೫೨ ರನ್‌ಗಳನ್ನು ಗಳಿಸಿದರು.
ಚೇತನ್ ಒಂದು ಸಿಕ್ಸರ್ ಹಾಗೂ ಒಂದು ಬೌಂಡರಿಯನ್ನು ಪಡೆಯುವುದರೊಂದಿಗೆ ೨೪ ರನ್‌ಗಳನ್ನು ಗಳಿಸಿದರು.
ಶಾಸಕ ಸತೀಶ್ ರೆಡ್ಡಿ ೧೧ ರನ್ ಪಡೆದರು. ಇದಕ್ಕೂ ಮುನ್ನ ಮೇಯರ್ ಮತ್ತು ಆಯುಕ್ತರ ನಡುವಣ ಹಗ್ಗದ ಆಟದಲ್ಲಿ ಮೇಯರ್ ತಂಡ ಜಯ ಪಡೆಯಿತು.

Write A Comment