ಕರ್ನಾಟಕ

ಹಳೆದ್ವೇಷಕ್ಕೆ ಯುವಕ ಬಲಿ

Pinterest LinkedIn Tumblr

killಬೆಂಗಳೂರು, ಏ. ೯-ಹಳೆಯ ದ್ವೇಷದಿಂದ ದುಷ್ಕರ್ಮಿಗಳು ಯುವಕ ನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದುರ್ಘಟನೆ ನಿನ್ನೆ ಮಧ್ಯರಾತ್ರಿ ಕತ್ರಿಗುಪ್ಪೆ ಮುಖ್ಯರಸ್ತೆಯ ಸಿದ್ಧಾರ್ಥ ಲೇಔಟ್‌ನಲ್ಲಿ ನಡೆದಿದೆ.
ಕತ್ರಿಗುಪ್ಪೆ ನಿವಾಸಿ ಚಂದ್ರಶೇಖರ್ ಅಲಿಯಾಸ್ ಟುಸ್ಸು (೨೦) ಕೊಲೆಯಾದ ಯುವಕನಾಗಿದ್ದಾನೆ. ದ್ವಿಚಕ್ರವಾಹನಗಳ ತೊಳೆಯುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್‌ನನ್ನು ಮಧ್ಯರಾತ್ರಿ ೧೨.೩೦ರ ವೇಳೆ ದುಷ್ಕರ್ಮಿಗಳು ಸಿದ್ಧಾರ್ಥ ಲೇಔಟ್‌ನ ಖಾಲಿ ಜಾಗವೊಂದರ ಬಳಿ ತಲೆ ದೇಹದ ಇತರ ಭಾಗಗಳಿಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಹಳೆಯ ದ್ವೇಷದ ಹಿನ್ನಲೆಯಲ್ಲಿ ಐದಾರು ಮಂದಿ ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆಯಿದ್ದು ಪ್ರಕರಣ ದಾಖಲಿಸಿರುವ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಲೋಕೇಶ್‌ಕುಮಾರ್ ತಿಳಿಸಿದ್ದಾರೆ.

ಸಿಲಿಂಡರ್ ಸ್ಫೋಟ ಬೇಕರಿ ಧ್ವಂಸ ಎಟಿಎಂಗೆ ಹಾನಿ
ಬೆಂಗಳೂರು,ಏ.೯- ಸಿಲಿಂಡರ್ ಸ್ಫೋಟಗೊಂಡು ಬೇಕರಿ ಧ್ವಂಸ ಗೊಂಡಿರುವ ದುರ್ಘಟನೆ ಕೊಡಿಗೇಹಳ್ಳಿ ಮುಖ್ಯರಸ್ತೆಯಲ್ಲಿ ಇಂದು ನಸುಕಿನಲ್ಲಿ ನಡೆದಿದೆ.
ಕೊಡಿಗೇಹಳ್ಳಿ ಮುಖ್ಯರಸ್ತೆಯ ಎಲ್.ವಿ. ಅಯ್ಯಂಗಾರ್ ಬೇಕರಿಯಲ್ಲಿದ್ದ ಸಿಲಿಂಡರ್ ಮುಂಜಾನೆ ೫.೪೦ರ ವೇಳೆ ಸ್ಫೋಟಗೊಂಡು ಬೇಕರಿ ಧ್ವಂಸಗೊಂಡರೆ ಎದುರಿಗಿದ್ದ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂಗೆ ಕೂಡ ಹಾನಿಯಾಗಿದೆ. ಬೇಕರಿಯಲ್ಲಾಗಲಿ ಎಟಿಎಂ ಬಳಿಯಾಗಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ,
ಸ್ಫೋಟದ ರಭಸಕ್ಕೆ ಬೇಕರಿಯಲ್ಲಿದ್ದ ವಸ್ತುಗಳು ಎಟಿಎಂನ ಶೆಲ್ಟರ್ ಮುಂಬದಿ ಗ್ಲಾಸ್ಗಳು ಸಹ ಒಡೆದು ಹೋಗಿವೆ.ಅಕ್ಕ ಪಕ್ಕದ ಮನೆಗಳಿಗೂ ಅಲ್ಪ ಪ್ರಮಾಣದ ಹಾನಿಸಂಭವಿಸಿದೆ.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ವಾಹನವೊಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ,ಕೊಡಿಗೇಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Write A Comment