ಕರ್ನಾಟಕ

ನಾಪತ್ತೆಯಾಗಿದ್ದ ಶಿಕ್ಷಕನೋರ್ವ ಶವವಾಗಿ ಪತ್ತೆ ! ಕೊಲೆ ಆರೋಪ

Pinterest LinkedIn Tumblr

3

ವಿಜಯಪುರ: ನಾಪತ್ತೆಯಾಗಿದ್ದ ಶಿಕ್ಷಕನೋರ್ವ ಶವವಾಗಿ ಪತ್ತೆಯಾದ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಬಸವರಾಜ ಎಂಬ ಶಿಕ್ಷಕ ಕಳೆದ ಒಂದು ವರಾದಿಂದ ನಾಪತ್ತೆಯಾಗಿದ್ದರು. ಆದರೆ ಇದೀಗ ಶಿಕ್ಷಕ ಬಸವರಾಜು ಶವವಾಗಿ ಪತ್ತೆಯಾಗಿದ್ದು, ಕುಟುಂಬಸ್ಥರು ಕೊಲೆ ಆರೋಪ ಮಾಡುತ್ತಿದ್ದಾರೆ.

ಪೊಲೀಸ್ ನಿರ್ಲಕ್ಷ್ಯ: ಬಸವರಾಜ ನಾಪತ್ತೆಯಾಗಿದ್ದರ ಬಗ್ಗೆ ಕುಟುಂಬಸ್ಥರು ಮನಗೂಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ ದೂರನ್ನು ಠಾಣೆಯ ಪಿಎಸ್‍ಐ ರಮೇಶ ಶಾಯಾಗೋಳ ಸ್ವಿಕರಿಸಲು ಮುಂದಾಗಲಿಲ್ಲವಂತೆ. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆ ಹೋದ ಕುಟುಂಬಸ್ಥರು ದೂರನ್ನೇನು ದಾಖಲಿಸಿದ್ದರಂತೆ. ಆದರೆ ಪಿಎಸ್‍ಐ ಬಸವರಾಜನನ್ನು ಹುಡುಕುವ ಪ್ರಯತ್ನವನ್ನೆ ಮಾಡಲಿಲ್ಲವಂತೆ.

ಇಂದು ಬಸವರಾಜ ಮೃತ ದೇಹ ವಿಜಯಪುರದ ಉಕ್ಕಲಿ ರಸ್ತೆ ಬಳಿ ಸಿಕ್ಕಿದೆ. ಇದರಿಂದ ಉದ್ರಿಕ್ತಗೊಂಡ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಇದು ಸಾಧಾರಣ ಸಾವಲ್ಲ. ಇದು ಕೊಲೆ ಮತ್ತು ಇದರಲ್ಲಿ ಪಿಎಸ್‍ಐ ರಮೇಶ ಪಾತ್ರವೂ ಇದೆ ಎಂದು ದೂರು ನೀಡಲು ಹೋದರೆ ಠಾಣೆಯವರು ದೂರು ದಾಖಲಿಸದ ಕಾರಣ ವಿಜಯಪುರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ ಎದುರೆ ಪ್ರತಿಭಟನೆ ನಡೆಸಿದರು.

ಸದ್ಯ ದೂರು ದಾಖಲಿಸಲು ಪೊಲೀಸ್ ವರಿಷ್ಠಾಧಿಕಾರಿಗಳು ಠಾಣೆಯ ಪಿಎಸ್‍ಐಗೆ ಸೂಚಿಸಿದ್ದು, ಬಸವರಾಜ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

Write A Comment