ಕರ್ನಾಟಕ

ರೈಲ್ವೆ ಹಳಿ ಮೇಲೆ ಸಾಹಸ ಮಾಡಲು ಹೋಗಿ ಅಪಾಯಕ್ಕೆ ಸಿಲುಕಿದ ಟೆಕ್ಕಿ ದಂಪತಿ ! ಮುಂದೇನಾಯಿತು ಇಲ್ಲಿದೆ ಓದಿ…

Pinterest LinkedIn Tumblr

 train accident

ರಾಮನಗರ: ರೈಲ್ವೆ ಹಳಿ ಮೇಲೆ ಸಾಹಸ ಮಾಡಲು ಹೋಗಿ ಟೆಕ್ಕಿ ದಂಪತಿ ಚಲಿಸುತ್ತಿದ್ದ ಜೀಪ್ ಹಳಿ ಮೇಲೆ ಸಿಲುಕಿಕೊಂಡ ಘಟನೆ ರಾಮನಗರ ತಾಲೂಕಿನ ಬಸವನಪುರ ಬಳಿ ನಡೆದಿದೆ.

ಬೆಂಗಳೂರು ಮೂಲದ ಸಂದೀಪ್ ಮತ್ತು ಪ್ರಭಾ ಸಾಫ್ಟ್‍ವೇರ್ ಕಂಪನಿಯೊಂದರ ಉದ್ಯೋಗಿಗಳಾಗಿದ್ದು, ಮೋಜು ಮಸ್ತಿಗೆಂದು ಬಂದು ಅವಾಂತವರ ಸೃಷ್ಟಿಸಿಕೊಂಡಿದ್ದಾರೆ. ಈ ಇಬ್ಬರು ಇಂದು ಬೆಳಿಗ್ಗೆ ಬಸವನಪುರದ ಬಳಿ ಜೀಪ್‍ನಿಂದ ಬಂಡೆಗಳ ಬಳಿ ಸಾಹಸವನ್ನು ನಡೆಸಲು ಮುಂದಾಗಿದ್ರು. ರೈಲ್ವೆ ಹಳಿ ದಾಟುತ್ತಿದ್ದ ವೇಳೆ ರೈಲು ಹಳಿಗಳ ನಡುವೆ ಸಿಲುಕಿಕೊಂಡಿತ್ತು. ರೈಲು ಬರುವುದನ್ನು ಗಮನಿಸಿದ ಟೆಕ್ಕಿಗಳಿಬ್ಬರೂ ಜೀಪ್‍ನಿಂದ ಜಿಗಿದಿದ್ದರು.

ದೂರದಿಂದಲೇ ಜೀಪ್ ನೋಡಿದ ರೈಲ್ವೆ ಚಾಲಕ ಕೂಡಲೇ ರೈಲು ನಿಲ್ಲಿಸಿದ್ರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಬಳಿಕ ಟೆಕ್ಕಿಗಳಾದ ಸಂದೀಪ್ ಹಾಗೂ ಪ್ರಭಾ ಇಬ್ಬರು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ. ಇದೀಗ ಚನ್ನಪಟ್ಟಣ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸ್ತಾ ಇದ್ದಾರೆ.

Write A Comment