ಕರ್ನಾಟಕ

ಕಡು ಬಡತನ : 1ಲಕ್ಷ ರೂ. ಗೆ 2 ತಿಂಗಳ ಕಂದಮ್ಮನನ್ನು ಮಾರಲು ಮುಂದಾದ ದಂಪತಿ ..!

Pinterest LinkedIn Tumblr

saleಹಾಸನ, ಮಾ.4-ಮಕ್ಕಳು ಬೇಕಾಂತರೆ ಮಕ್ಕಳಿಲ್ಲದಿರುವವರು, ಮಕ್ಕಳೇ ಬೇಡ ಅಂತಾರೆ ಮಕ್ಕಳನ್ನು ಹೆತ್ತವರು….. ನಿಜ ಇದು ಈ ಕಲಿಗಾಲಕ್ಕೆ ಸೂಕ್ತವಾಗಿದೆ. ಮಕ್ಕಳಿಗಾಗಿ ಹಲವು ದೇವರುಗಳಲ್ಲಿ ಹರಕೆ ಕಟ್ಟಿ ಲಕ್ಷಾಂತರ ರೂ. ಹಣ ಖರ್ಚು ಮಾಡುತ್ತಾರೆ. ಆದರೆ ಈ ದಂಪತಿ ಹೆತ್ತ ಮಗುವನ್ನೇ ಮಾರಾಟಕ್ಕೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಗುಂಡನಕೆರೆ ಗ್ರಾಮದಲ್ಲಿ ನಡೆದಿದೆ.

ಏನಿದು ಘಟನೆ?

ಗ್ರಾಮದ ರವಿ ಮತ್ತು ಪ್ರೇಮಕುಮಾರಿ ದಂಪತಿಗೆ ಎರಡು ಬಾರಿ ಅವಳಿ ಮಕ್ಕಳು ಜನಿಸಿದ್ದು, ಒಟ್ಟು ನಾಲ್ಕು ಮಕ್ಕಳಿದ್ದಾರೆ. ತೀರಾ ಬಡತನ. ಮಕ್ಕಳನ್ನು ಸಾಕಲು ಸಾಧ್ಯವಾಗದೆ ಮಗುವನ್ನು ಮಾರಿ ಬಿಡೋಣ ಎಂಬ ಕಠಿಣ ನಿರ್ಧಾರ ಮಾಡಿಕೊಂಡು ಒಂದು ಲಕ್ಷ ರೂ. ಗೆ ಎರಡು ತಿಂಗಳ ಗಂಡು ಮಗುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಸ್ಥಳೀಯರು ಅನುಮಾನಗೊಂಡು ವಿಚಾರಿಸಿದಾಗ ದಂಪತಿ ಮಗು ಮಾರಾಟ ಮಾಡುವ ಯತ್ನದಲ್ಲಿರುವುದು ಬೆಳಕಿಗೆ ಬಂದಿದೆ.

ಈ ವಿಷಯವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳಿಗೆ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಅಧಿಕಾರಿಗಳು ದಂಪತಿಯನ್ನು ವಿಚಾರಣೆ ನಡೆಸಿದಾಗ, ಕಡು ಬಡತನ ನಮ್ಮನ್ನು ಕಾಡುತ್ತಿದ್ದು, ಮಕ್ಕಳನ್ನು ಪೋಷಿಸಲಾಗದೆ ಇಂತಹ ಕಠಿಣ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದರು. ಮಗು ಮಾರಾಟ ಕಾನೂನಿಗೆ ವಿರುದ್ಧವಾಗಿದ್ದು, ಅಧಿಕಾರಿಗಳು ಮಗುವನ್ನು ರಕ್ಷಣೆ ಮಾಡಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಸಕಲೇಶಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Write A Comment