ಕರ್ನಾಟಕ

‘ಎಸ್ಮಾ ಬೆದರಿಕೆಗೆ ಬಗ್ಗುವುದಿಲ್ಲ ?’

Pinterest LinkedIn Tumblr

esmaಬೆಂಗಳೂರು, ಎ.೪- ಎಸ್ಮಾ ಸೇರಿದಂತೆ ಯಾವುದೇ ಬೆದರಿಕೆಗೂ ಜಗ್ಗುವುದಿಲ್ಲ. ಬೇಡಿಕೆ ಈಡೇರುವವರೆಗೂ ದ್ವಿತೀಯ ಪಿಯುಸಿ ಮೌಲ್ಯಮಾಪನಕ್ಕೆ ಹಾಜರಾಗುವುದಿಲ್ಲ ಎಂದು ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಸ್ಪಷ್ಟಪಡಿಸಿದ್ದಾರೆ.
ವೇತನ ತಾರತಮ್ಯ ಸರಿಪಡಿಸಬೇಕು, ಕುಮಾರ್ ನಾಯಕ್ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಪಿಯುಸಿ ಮೌಲ್ಯಮಾಪನ ಬಹಿಷ್ಕರಿಸಿ ಸಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಬೆದರಿಕೆಗೆ ನಾವು ಬೆದರುವುದಿಲ್ಲ. ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ನಮ್ಮನ್ನು ಹೆದರಿಸುತ್ತಿದೆ. ಇದಕ್ಕೆ ನಾವು ಸೊಪ್ಪು ಹಾಕುವುದಿಲ್ಲ. ಈಗಾಗಲೇ ಸಂಘದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಪ್ರತಿಭಟನೆ ಮುಂದುವರಿಸುತ್ತೇವೆ. ಎಸ್ಮಾ ಸೇರಿದಂತೆ ಯಾವುದೇ ಕ್ರಮ ಬೇಕಾದರೂ ಕೈಗೊಳ್ಳಲಿ ಎಂದು ಅವರು ಸವಾಲು ಹಾಕಿದರು.
ವೇತನ ತಾರತಮ್ಯ ಸರಿಪಡಿಸುವಂತೆ ಸರ್ಕಾರವೇ ನೇಮಿಸಿರುವ ಕುಮಾರ್ ನಾಯಕ್ ವರದಿ ಶಿಫಾರಸು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ವರದಿ ಸಲ್ಲಿಕೆಯಾಗಿ ಹಲವು ವರ್ಷಗಳು ಕಳೆದರೂ ಎಲ್ಲಾ ಸರ್ಕಾರಗಳು ಕೇವಲ ಭರವಸೆ ನೀಡುತ್ತಿದೆಯೇ ಹೊರತು ಕಾರ್ಯರೂಪಕ್ಕೆ ತರಲು ಮುಂದಾಗುತ್ತಿಲ್ಲ. ಆದ್ದರಿಂದ ಅನಿವಾರ್ಯವಾಗಿ ಧರಣಿ ಆರಂಭಿಸಿದ್ದೇವೆ ಎಂದು ಹೇಳಿದರು.
ಪ್ರಾಂಶುಪಾಲರ ಸಂಘದ ಅಧ್ಯಕ್ಷ ಶ್ರೀಕಂಠಯ್ಯ ಮಾತನಾಡಿ, ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ಬಹಿಷ್ಕರಿಸುವುದಾಗಿ ಪ್ರೌಢಶಾಲಾ ಶಿಕ್ಷಕರು ತೀರ್ಮಾನಿಸಿದ್ದು, ಅವರ ಬೇಡಿಕೆಯೂ ಸಮರ್ಪಕವಾಗಿದೆ. ಆದ್ದರಿಂದ ಅವರ ಹೋರಾಟಕ್ಕೂ ಬೆಂಬಲ ನೀಡುವುದಾಗಿ ತಿಳಿಸಿದರು.
ನಾಳೆಯಿಂದ ಪಿಯುಪಿ ಮೌಲ್ಯಮಾಪನ ಆರಂಭಗೊಳ್ಳಲಿದ್ದು, ನಿನ್ನೆಯಿಂದ ಕೋಡಿಂಗ್ ಮತ್ತು ಡೀಕೋಡಿಂಗ್ ನಡೆಯಬೇಕಿತ್ತು. ಆದರೆ ನಿನ್ನೆಯಿಂದಲೇ ಶಿಕ್ಷಕರು ಧರಣಿ ನಡೆಸುತ್ತಿರುವುದರಿಂದ ಯಾರೂ ಕೋಡಿಂಗ್ ವ್ಯವಸ್ಥೆ ಹಾಜರಾಗಿಲ್ಲ. ಆದ್ದರಿಂದ ಈ ಬಾರಿ ಪಿಯುಸಿ ಫಲಿತಾಂಶ ವಿಳಂಬವಾಗಿ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಉನ್ನತ ವ್ಯಾಸಂಗಕ್ಕೆ ಪ್ರವೇಶ ಪರೀಕ್ಷೆ ಬರೆಯುವವರಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಸರ್ಕಾರ ಈಗಾಗಲೇ ಸಂಘದ ಮುಖಂಡರೊಂದಿಗೆ ನಡೆಸಿದ ಮಾ|ತುಕತೆ ವಿಫಲವಾಗಿದೆ.

Write A Comment