ಕರ್ನಾಟಕ

ಕೋಲ್ಕತಾ ಮೇಲ್ಸೇತುವೆ ದುರಂತ: ಐವಿಆರ್ ಸಿಎಲ್ ನಿಂದ ಕರ್ನಾಟಕದಲ್ಲೂ 12 ಯೋಜನೆ

Pinterest LinkedIn Tumblr

Kolkataಬೆಂಗಳೂರು: ಕೋಲ್ಕತಾದಲ್ಲಿ ಕುಸಿದುಬಿದ್ದ ಮೇಲ್ಸೇತುವೆಯನ್ನು ನಿರ್ಮಿಸುತ್ತಿದ್ದ ಐವಿ ಆರ್ ಸಿಎಲ್ ಕಂಪನಿ ರಾಜ್ಯದಲ್ಲೂ 12 ಯೋಜನೆಗಳ ಕಾಮಗಾರಿಗಳನ್ನು ನಿರ್ವಹಿಸುತ್ತಿದೆ. ಈ ಪೈಕಿ ಮೆಟ್ರೋ ರೈಲ್ವೆಯ 6 ನಿಲ್ದಾಣಗಳ ಕಾಮಗಾರಿಗಳೂ ಸೇರಿವೆ.
ಐವಿಆರ್ ಸಿಎಲ್ ಸಂಸ್ಥೆ ನಿರ್ಮಿಸುತ್ತಿದ್ದ ಮೇಲ್ಸೇತುವೆ ಕುಸಿದುಬಿದ್ದಿರುವುದು ಸುರಕ್ಷಿತ ಮತ್ತು ಸಮರ್ಥ ಕಾಮಗಾರಿಯ ಬಗೆಗೆ ಕಂಪನಿ ಹೊಂದಿರುವ ಬದ್ಧತೆ ಕುರಿತು ಪ್ರಶ್ನೆ ಮೂಡಲು ಕಾರಣವಾಗಿದೆ. ಆದರೆ ಕರ್ನಾಟಕದಲ್ಲಿ ಈ ವರೆಗೂ ಯಾವುದೇ ಅವಗಢಗಳೂ ಸಂಭವಿಸದಂತೆ ಯಶಸ್ವಿಯಾಗಿ ಕಾಮಗಾರಿ ಮುಕ್ತಾಯಗೊಳಿಸಿರುವ ಉದಾಹರಣೆಗಳಿವೆ.
ಐವಿಆರ್ ಸಿಎಲ್ ಕಂಪನಿ ನಿರ್ಮಿಸಿರುವ ಹಲಸೂರು, ಸಿಎಂ ಹೆಚ್ ರಸ್ತೆ, ಹಳೆ ಮದ್ರಾಸ್ ರಸ್ತೆ, ಬೈಯ್ಯಪ್ಪನಹಳ್ಳಿ, ಆರ್ ವಿ ರಸ್ತೆ, ಜಯನಗರ ಮೆಟ್ರೋ ನಿಲ್ದಾಣಗಳ ಪೈಕಿ ಈಗಾಗಲೇ 4 ನಿಲ್ದಾಣಗಳು ಕಾರ್ಯಾಚರಣೆ ನಡೆಸುತ್ತಿದ್ದು ಜಯನಗರ ಮೆಟ್ರೋ ನಿಲ್ದಾಣ ಹಾಗೂ ಆರ್ ವಿ ರಸ್ತೆ ನಿಲ್ದಾಣ ಇನ್ನಷ್ಟೇ ಉದ್ಘಾಟನೆಯಾಗಬೇಕಿದೆ.
ಐವಿಆರ್ ಸಿ ಎಲ್ ನ ಬೆಂಗಳೂರು ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿ ಧರ್ಮ, ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕಳೆದ 30 ವರ್ಷಗಳ ಕಂಪನಿ ನಡೆಸಿರುವ ಕಾಮಗಾರಿಗಳಲ್ಲಿ ಕೋಲ್ಕತಾ ಮಾದರಿಯ ದುರಂತಗಳು ಸಂಭವಿಸಿಲ್ಲ. ಕೋಲ್ಕತಾ ಘಟನೆ ದುರದೃಷ್ಟಕರ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಮೆಟ್ರೋ ಯೋಜನೆಗಳನ್ನು ಹೊರತುಪಡಿಸಿ ಐವಿಆರ್ ಸಿಎಲ್ ಸಂಸ್ಥೆ ಕರ್ನಾಟಕದಲ್ಲಿ ನೀರು ಪೂರೈಕೆ, ನೀರಾವರಿ ಹಾಗೂ ವಿದ್ಯುತ್ ಯೋಜನೆಗಳ ಕಾಮಗಾರಿಗಳನ್ನು ನಿರ್ವಹಿಸುತ್ತಿವೆ.

Write A Comment