ಕರ್ನಾಟಕ

ರಂಗ ಶಂಕರದಲ್ಲಿ ರಂಗಯುಗಾದಿ: ಪ್ರಕಾಶ್‌ ರೈ ಬೇಂದ್ರೆ ಕವನ ಓದ್ತಾರೆ

Pinterest LinkedIn Tumblr

1_7ಸಾಂಪ್ರದಾಯಿಕ ಯುಗಾದಿಯನ್ನು “ರಂಗಯುಗಾದಿ’ ಮಾಡಿದ ಹೆಗ್ಗಳಿಕೆ ರಂಗಶಂಕರದ್ದು. ಈ ಸಲವೂ ಯುಗಾದಿ ಯನ್ನು ರಂಗಭೂಮಿಗೋಸ್ಕರ ಮುಡಿಪಿಡಲಾಗುತ್ತಿದೆ. ಈಗಾಗಲೇ ಕನ್ನಡದ ಒಬ್ಬ ಮಹನೀಯರ ನೆನಪಿನಲ್ಲಿ ರಂಗ ಯುಗಾದಿಯನ್ನು ಆಚರಿಸುತ್ತಾ ಬಂದಿದ್ದು ಡಾ. ಚಂದ್ರಶೇಖರ ಕಂಬಾರ, ಲಂಕೇಶ್‌, ಪೂರ್ಣ ಚಂದ್ರ ತೇಜಸ್ವಿ, ಅನಂತಮೂರ್ತಿ ಮುಂತಾದವರ ಹೆಸರಿನಲ್ಲಿ ರಂಗ ಯುಗಾದಿಯನ್ನು ಆಚರಿಸಲಾಗಿದೆ.

ಈ ಸಲ ಕನ್ನಡದ ವರಕವಿ ದ ರಾ ಬೇಂದ್ರೆ ಅವರ ನೆನಪಿನ ರಂಗ ಯುಗಾದಿಯನ್ನು ಆಚರಿಸಲಾಗುತ್ತಿದೆ. ಈ ಭಾನುವಾರ ಇಡೀ ದಿನ ಯುಗಾದಿ ಹಬ್ಬದ ಭರ್ಜರಿ ಆಚರಣೆ. ನಾಟಕ ಪ್ರದರ್ಶನಗಳು, ಕವನ ವಾಚನ ಮತ್ತು ಗಾಯನ, ಕಥಾ ವಾಚನ, ಸಂವಾದ, ಬೇಂದ್ರೆಯವರ ಗದ್ಯದ ಓದು ಇತ್ಯಾದಿ ಕಾರ್ಯಕ್ರಮಗಳನ್ನು ಒಳಗೊಂಡ ಈ ಸಂಭ್ರಮ ಬೆಳಿಗ್ಗೆ ಹತ್ತು ಗಂಟೆಗೆ ಆರಂಭವಾಗಲಿದೆ.

ಬೆಳಿಗ್ಗೆ 10ಕ್ಕೆ: “ಬಾ ಹತ್ತರ’ ಬೇಂದ್ರೆ ಪರಿಚಯ ಕಾರ್ಯಕ್ರಮ ಅನಂತ ದೇಶಪಾಂಡೆ ಅವರಿಂದ.

11ಕ್ಕೆ: ವಿಎಎಸ್‌ಪಿ ತಂಡದಿಂದ “ಆ ಥರಾ ಈ ಥರಾ’ ನಾಟಕ. ನಿರ್ದೇಶನ ಸುಮನ್‌ ಜಾದುಗಾರ್‌ ಅವರದ್ದು.

ಮಧ್ಯಾಹ್ನ 12ಕ್ಕೆ: ನಾದಲೀಲೆ. ಬೇಂದ್ರಯವರ ಕವನಗಳ ವಾಚನ. ವಾಚಿಸುವವರು ಎಸ್‌ ದಿವಾಕರ್‌, ಪ್ರಕಾಶ್‌ ರೈ, ಯೋಗರಾಜ ಭಟ್‌, ಟಿ ಎನ್‌ ಸೀತಾರಾಮ್‌, ಜೋಗಿ, ವನಮಾಲ ವಿಶ್ವನಾಥ್‌, ಪ್ರತಿಭಾ ನಂದಕುಮಾರ್‌, ಭಾನುಮತಿ, ಚಿದಂಬರ ನರೇಂದ್ರ, ಶ್ರೀದೇವಿ ಕಳಸದ, ಸಂಧ್ಯಾರಾಣಿ, ಎಂ ಡಿ ಪಲ್ಲವಿ, ಬಿಂದು ಮಾಲಿನಿ ಮುಂತಾದವರು.

ಮಧ್ಯಾಹ್ನ 3.30ಕ್ಕೆ ಅಭಿನಯ ತರಂಗ ಅಭಿನಯಿಸೋ ನಾಟಕ- “ಉದ್ಧಾರ’. ನಿರ್ದೇಶನ ಮಂಜು ನಾಥ ಬಡಿಗೇರ್‌ ಅವರದ್ದು.

ಸಂಜೆ 5ಕ್ಕೆ “ಉತ್ತರಾಯಣ’, ಬೇಂದ್ರೆಯವರ ನೆನಪುಗಳು. ಗಿರೀಶ್‌ ಕಾರ್ನಾಡ್‌, ಗೋಪಾಲ ವಾಜಪೇಯಿ ಅವರೆಲ್ಲಾ ಬೇಂದ್ರೆಯ ವರನ್ನ ಜ್ಞಾಪಿಸಿಕೊಳ್ಳಲಿದ್ದಾರೆ.

ಸಂಜೆ 6ಕ್ಕೆ “ಶ್ರಾವಣ ಪ್ರತಿಭೆ’, ಬೇಂದ್ರೆಯವರ ಗದ್ಯದ ಓದು ಕಾರ್ಯಕ್ರಮ. ಜಯಂತ್‌ ಕಾಯ್ಕಿಣಿ, ಎಸ್‌ ಸುರೇಂದ್ರನಾಥ್‌ ಅವರು ಗದ್ಯವನ್ನು ವಾಚಿಸಲಿದ್ದಾರೆ.

ಸಂಜೆ 7.30ಕ್ಕೆ ನಟನ ಮೈಸೂರು ತಂಡದಿಂದ ನಾಟಕ – ಸಾಯೋ ಆಟ. ಇದನ್ನು ಮಂಡ್ಯ ರಮೇಶ್‌ ಅವರು ನಿರ್ದೇಶಿಸಿದ್ದಾರೆ.

ಮತೇನ್‌ ವಿಶೇಷ?
ಆ ದಿನದ ವಿಶೇಷವಾಗಿ ಧಾರವಾ ಡದ ತಿನಿಸುಗಳು ರಂಗ ಶಂಕರದ ಕೆಫೆಯಲ್ಲಿ ರಾರಾಜಿಸಲಿವೆ. ಜೋಳದ ರೊಟ್ಟಿ, ಬದನೆಕಾಯಿ ಎಣಗಾಯಿ, ಕಾಳು ಪಲ್ಯ, ಮಿಸಳ್‌ ಭಾಜಿ, ಒಗ್ಗರಣೆ ಮಂಡಕ್ಕಿ, ಪಾವ್‌, ಮೆಣಸಿನಕಾಯಿ ಬಜ್ಜಿ, ಮಾವಿನಕಾಯಿ ಚಿತ್ರಾನ್ನ, ಮೊಸರು ಬಜ್ಜಿ, ಹೋಳಿಗೆ, ಶ್ಯಾವಿಗೆ ಪಾಯಸ, ಮಸಾಲಾ ಮಜ್ಜಿಗೆ, ಕರಬೂಜ ರಸ, ಬೇಲದ ಹಣ್ಣಿನ ಪಾನಕ, ಖಡಕ್‌ ಚಹಾ, ಚೂಡ
-ಉದಯವಾಣಿ

Write A Comment