ಕರ್ನಾಟಕ

ಮುಖ್ಯ ಪೇದೆಗೆ ಇರಿದು ಇಬ್ಬರು ಪರಾರಿ ಮತ್ತೊಬ್ಬ ಸೆರೆ

Pinterest LinkedIn Tumblr

arreಬೆಂಗಳೂರು, ಎ.೧: ವಿಚಾರಣೆಗಾಗಿ ಠಾಣೆಗೆ ಕರೆದೊಯ್ಯುತ್ತಿದ್ದ ಪೊಲೀಸ್ ಮುಖ್ಯ ಪೇದೆಯೊಬ್ಬರಿಗೆ ಚಾಕುವಿನಿಂದ ಇರಿದು ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿದ್ದರೆ, ಮತ್ತೊಬ್ಬ ದುಷ್ಕರ್ಮಿ ವೈಯಾಲಿಕಾವಲ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಚಾಕು ಇರಿತದಿಂದ ಕೈ-ಕಾಲುಗಳಿಗೆ ಗಂಭೀರವಾಗಿ ಗಾಯಗೊಂಡಿರುವ ವೈಯಾಲಿಕಾವಲ್ ಮುಖ್ಯ ಪೇದೆ ನಾಗರಾಜ್ ಅವರು ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪೊಲೀಸರಿಗೆ ಸಿಕ್ಕಿ ಬಿದ್ದಿರುವ ದುಷ್ಕರ್ಮಿ ಮಂಜ ಎಂಬಾತನನ್ನು ತೀವ್ರ ವಿಚಾರಣೆಗೆ ಒಳಪಡಿಸಿ, ಪರಾರಿಯಾಗಿರುವ ಇಬ್ಬರಿಗಾಗಿ ವೈಯಾಲಿಕಾವಲ್ ಪೊಲೀಸರ ವಿಶೇಷ ತಂಡ ತೀವ್ರ ಶೋಧ ನಡೆಸಿದೆ.
ಅನುಮಾನಾಸ್ಪದವಾಗಿ ಆಟೊದಲ್ಲಿ ಬಂದ ಮೂವರು ದುಷ್ಕರ್ಮಿಗಳನ್ನು ವಿಚಾರಣೆ ನಡೆಸಲು ಠಾಣೆಗೆ ಕೊರೆದೊಯ್ಯುತ್ತಿದ್ದ ವೈಯಾಳಿಕಾವಲ್ ಪೊಲೀಸ್ ಠಾಣೆಯ ಮುಖ್ಯ ಪೇದೆ ನಾಗರಾಜ್ ಅವರಿಗೆ ಅವರಲ್ಲಿ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದು, ಮತ್ತೊಬ್ಬನನ್ನು ಬಂಧಿಸಲಾಗಿದೆ.
ಮುಖ್ಯ ಪೇದೆ ನಾಗರಾಜ್ ಅವರು ಪೇದೆ ರೇವಣ್ಣ ಸಿದ್ದಪ್ಪ ಅವರೊಂದಿಗೆ ಕಳೆದ ರಾತ್ರಿ ೧೨.೩೦ರ ವೇಳೆ ವೈಯಾಳಿಕಾವಲ್‌ನ ಹುಲ್ಲುಛತ್ರದ ಬಳಿ ಚೀತಾ ಬೈಕ್‌ನಲ್ಲಿ ಗಸ್ತು ತಿರುತ್ತಿದ್ದರು.
ಈ ವೇಳೆ ಒಂದು ಸಂಖ್ಯೆಯನ್ನು ಮುಚ್ಚಿರುವ ನೋಂದಣಿ ಸಂಖ್ಯೆಯ ಆಟೋವೊಂದು ಅನುಮಾನಾಸ್ಪದವಾಗಿ ಬಂದಿದ್ದು, ಅದನ್ನು ತಡೆದ ನಾಗರಾಜ್ ಅವರು ಅದೇ ಆಟೋ ಹತ್ತಿಕೊಂಡು ಅದರಲ್ಲಿದ್ದ ಮೂವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದರು.
ಮಾರ್ಗಮಧ್ಯೆ ವಿನಾಯಕ ವೃತ್ತದ ಬಳಿ ಇಬ್ಬರು ದುಷ್ಕರ್ಮಿಗಳು ನಾಗರಾಜ್ ಅವರಿಗೆ ಕೈಕಾಲುಗಳಿಗೆ ಚಾಕುವಿನಿಂದ ಇರಿದು ಅವರನ್ನು ಹೊರಗೆ ದಬ್ಬಿ ಪರಾರಿಯಾಗಿದ್ದಾರೆ. ಇವರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ರೇವಣ್ಣ ಸಿದ್ದಪ್ಪ ನಾಗರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ವಾಕಿಟಾಕಿ ಮೂಲಕ ಠಾಣೆಗೆ ಮಾಹಿತಿ ನೀಡಿದರು.
ಕೂಡಲೇ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆಟೋವನ್ನು ಹಿಂಬಾಲಿಸಿದ್ದಾರೆ. ವೇಗವಾಗಿ ಹೋಗುತ್ತಿದ್ದ ಆಟೋ ಸ್ವಲ್ಪ ದೂರದಲ್ಲಿ ಉರುಳಿ ಬಿದ್ದಿದ್ದು, ಇಬ್ಬರು ಪರಾರಿಯಾದರೆ ಮತ್ತೊಬ್ಬ ಮಂಜ ಎಂಬಾತ ಪೊಲೀಸರು ಸಿಕ್ಕಿಬಿದ್ದಿದ್ದಾನೆ.
ಸುದ್ದಿ ತಿಳಿದ ಕೂಡಲೇ ಠಾಣೆಗೆ ತೆರಳಿದ ಡಿಸಿಪಿ ಸಂದೀಪ್ ಪಾಟೀಲ್ ಅವರು ಮಾಹಿತಿ ಪಡೆದು ನಾಗರಾಜ್ ಅವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಿದ್ದಾರೆ. ಪರಾರಿಯಾಗಿರುವ ಇಬ್ಬರು ದುಷ್ಕರ್ಮಿಗಳ ಶೋಧಕ್ಕೆ ವಿಶೇಷ ತಂಡ ರಚಿಸಲಾಗಿದೆ.

Write A Comment