ಕರ್ನಾಟಕ

ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ; ಆತ್ಮಹತ್ಯೆಗೆ ಮುಂದಾದ ಪೋಷಕರು

Pinterest LinkedIn Tumblr

jeeva

ಬೆಂಗಳೂರು: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಎರಡನೇ ಬಾರಿ ಸೋರಿಕೆಯಾದ ಹಿನ್ನೆಲೆಯಲ್ಲಿ ಆಕ್ರೋಶಗೊಂ‌ಡ ಪೋಷಕರೊಬ್ಬರು, ನ್ಯಾಯ ಒದಗಿಸುವಂತೆ ಆಗ್ರಹಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ನಡೆದಿದೆ.

ಮಲ್ಲೇಶ್ವರಂನ ಪಿಯು ಮಂಡಳಿಯ ಕಚೇರಿ ಮೇಲೇರಿ ಆತ್ಮಹತ್ಯೆ ಬೆದರಿಕೆ ಹಾಕಿದ ಪೋಷಕರೊಬ್ಬರನ್ನು ಮನವೊಲಿಸಿ ಕೆಳಗಿಳಿಸುವಲ್ಲಿ ಪೊಲೀಸರು ಯಶಸ್ವಿಯಾದರು.

ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದನ್ನು ಪ್ರತಿಭಟಿಸಲು ವಿದ್ಯಾರ್ಥಿಗಳು ಹಾಗೂ ಪೋಷಕರು ಪಿ.ಯು. ಮಂಡಲಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಪೋಷಕರೊಬ್ಬರು ಕೋಪೋದ್ರಿಕ್ತರಾಗಿ ಮಂಡಲಿ ಕಚೇರಿಯ ಕಟ್ಟಡ‌ಮೇಲೇರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದರು. ಪೊಲೀಸರು ಹಾಗೂ ಮತ್ತಿತರ ಪೋಷಕರು ಅವರ ಆತ್ಮಹತ್ಯೆಗೆ ಮುಂದಾದ ವ್ಯಕ್ತಿಯ ಮನ ಒಲಿಸಿ ಕೆಳಗಿಳಿಸಿದರು.

Write A Comment