ಕರ್ನಾಟಕ

29 ಮಂದಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Pinterest LinkedIn Tumblr

prasastiಬೆಂಗಳೂರು: ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ, ಸಂಶೋಧಕ ಪ್ರೊ. ಷ. ಶೆಟ್ಟರ್, ಚಿಂತಕ ಡಾ. ಜಿ. ರಾಮಕೃಷ್ಣ, ಕತೆಗಾರ ಎಂ.ಎಸ್. ಶ್ರೀರಾಮ್ ಹಾಗೂ ಲಕ್ಷ್ಮೀಶ ತೋಳ್ಪಾಡಿ ಸೇರಿ 29 ಮಂದಿಗೆ 2013-14 ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣ್ಣಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ವಿಜೇತರ ಮಾಹಿತಿ ಪ್ರಕಟಿಸಿದರು. ಏ.29ರಂದು ಧಾರವಾಡದಲ್ಲಿ ನಡೆಯುವ ಸಮಾರಂಭದಲ್ಲಿ ಗೌರವ ಪ್ರಶಸ್ತಿ, ಪುಸ್ತಕ ಪ್ರಶಸ್ತಿ ಮತ್ತು ದತ್ತಿ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.

2014ರ ಸಾಲಿನ ಗೌರವ ಪ್ರಶಸ್ತಿಯನ್ನು ಸಂಶೋಧಕ

ಪ್ರೊ. ಷ.ಶಟ್ಟರ್, ಚಿಂತಕ ಡಾ. ಜಿ.ರಾಮಕೃಷ್ಣ,

ಕವಿ ಸುಬ್ರಾಯ ಚೊಕ್ಕಾಡಿ, ಧಾರಾವಾಡದ ಪ್ರೊ. ಸುಕನ್ಯಾ ಮಾರುತಿ, ಶಿವಮೊಗ್ಗದ ಸವಿತಾ ನಾಗಭೂಷಣ ಅವರಿಗೆ ಘೊಷಿಸಲಾಗಿದೆ.

2013 ಪುಸ್ತಕ ಪ್ರಶಸ್ತಿ: ಕಾವ್ಯ ಪ್ರಕಾರ- ಸುಬ್ಬು ಹೊಲೆಯಾರ್ (ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ), ಕಾದಂಬರಿ – ರಜನಿ ನರಹಳ್ಳಿ (ಆತ್ಮವೃತ್ತಾಂತ), ಸಣ್ಣಕಥೆ-ಎಂ.ಎಸ್.ಶ್ರೀರಾಮ್ (ಸಲ್ಮಾನ್​ಖಾನ್​ನ ಡಿಫಿಕಲ್ಟೀಸು), ನಾಟಕ – ಡಾ. ವೈ.ಕೆ. ನಾರಾಯಣ ಸ್ವಾಮಿ (ಅನಭಿಜ್ಞ ಶಾಕುಂತಲ), ಲಲಿತಾ ಪ್ರಬಂಧ- ಎಂ.ಡಿ. ಗೊಗೇರಿ (ಮಹಾಮಾತೆ ಮಲ್ಲಕ್ಕ ಮತ್ತು ಇತರ ಪ್ರಬಂಧಗಳು), ಪ್ರವಾಸ ಸಾಹಿತ್ಯ- ಡಾ. ಎಚ್.ಎಸ್. ಅನುಪಮಾ (ಅಂಡಮಾನ್ ಕಂಡ ಹಾಗೆ), ಆತ್ಮಕಥೆ- ಕುಪ್ಪೆ ನಾಗರಾಜ (ಅಲೆಮಾರಿಯ ಅಂತರಂಗ),

ಸಾಹಿತ್ಯ ವಿಮರ್ಶೆ-ಪ್ರಭಾಕರ ಆರ್ಚಾಯ (ಕವಿತೆಯ ಓದು), ಮಕ್ಕಳ ಸಾಹಿತ್ಯ – ಹ.ಸ. ಬ್ಯಾಕೋಡ (ಹಾರದಿರಲಿ ಪ್ರಾಣ ಪಕ್ಷಿ), ವಿಜ್ಞಾನ ಸಾಹಿತ್ಯ- ಟಿ.ಎಸ್.ಗೊರವರ (ಕಾಡು ಕಲಿಸಿದ ಪಾಠ), ಮಾನವಿಕ- ಎನ್. ಜಗದೀಶ್ ಕೊಪ್ಪ (ಎಂದೂ ಮುಗಿಯದ ಯುದ್ಧ), ಸಂಶೋಧನೆ- ಡಾ.ಬಸವರಾಜ ಕಲ್ಗುಡಿ (ಮೈಯೇ ಸೂರು ಮನವೇ ಮಾತು), ಸೃಜನಶೀಲ ಅನುವಾದ – ಅನುವಾದಕ ಡಾ. ಆರ್. ಲಕ್ಷ್ಮೀನಾರಾಯಣ (ಬೇಗುದಿ), ಸೃಜನೇತರ ಅನುವಾದ – ಡಿ. ಸುಜ್ಞಾನಮೂರ್ತಿ (ತೆಲಂಗಾಣ ಹೋರಾಟ), ಸಂಕೀರ್ಣ- ಲಕ್ಷ್ಮೀಶ ತೋಳ್ಪಾಡಿ (ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ), ಲೇಖಕರ

ಮೊದಲ ಕೃತಿ- ಶ್ರುತಿ ಬಿ.ಎಸ್. (ಬದುಕ ದಿಕ್ಕು ಬದಲಿಸಿದ ಅಸ್ಟಿಯೋ ಸಕೋಮ).

***

2013ರ ಅಕಾಡೆಮಿಯ ದತ್ತಿನಿಧಿ ಪ್ರಶಸ್ತಿ

*ಚದುರಂಗ ದತ್ತಿ ನಿಧಿ: ಅನಾವರಣ(ಕಾದಂಬರಿ), ಸಿ.ಆರ್. ಪಾರ್ಥಸಾರಥಿ.

*ಸಿಂಪಿ ಲಿಂಗಣ್ಣ ದತ್ತಿನಿಧಿ: ನೆಲದೊಡಲ ಚಿಗುರು, ಡಾ.ಎಲ್.ನಾರಾಯಣರೆಡ್ಡಿ (ಜೀವನ ಚರಿತ್ರೆ) ಎನ್.ಎಲ್.ಆನಂದ್ ಮತ್ತು ಗುಂಡಪ್ಪ ದೇವಿಕೇರಿ

*ಪಿ.ಶ್ರೀನಿವಾಸರಾವ್ ದತ್ತಿನಿಧಿ: ಸಾಹಿತ್ಯ ಸಿಂಚನ (ವಿಮರ್ಶೆ) ಡಾ.ಬಸವರಾಜ ಸಬರದ

*ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ: ಕುರಿಂಜೆ ಜೇನು (ಅನುವಾದ) ಡಾ.ಅಶೋಕ್ ಕುಮಾರ್

*ಮಧುರಚೆನ್ನ ದತ್ತಿನಿಧಿ: ಅಮೃತಕ್ಕೆ ಹಾರಿದ ಗರುಡ (ಮೊದಲ ಸ್ವತಂತ್ರ ಕೃತಿ) ಪ್ರೊ. ರಮೇಶ ಮ. ಕಲ್ಲನಗೌಡರ

*ಅಮೆರಿಕನ್ನಡ ದತ್ತಿನಿಧಿ: ಹಂಟ್ ಬ್ಯಾಂಗಲ್ ಕಮಿಲಿಯನ್(ಕನ್ನಡದಿಂದ ಇಂಗ್ಲಿಷ್​ಗೆ ಅನುವಾದ) ದೀಪಾ ನಾಗೇಶ್

***

10 ಸಾವಿರ ನಗದು

ಪ್ರಶಸ್ತಿಯು ತಲಾ 10 ಸಾವಿರ ನಗದು ಒಳಗೊಂಡಿದೆ. 2013ನೇ ಸಾಲಿನ ಪುಸ್ತಕ ಬಹುಮಾನಕ್ಕೆ 16 ಕೃತಿಗಳು ಆಯ್ಕೆ ಆಗಿದ್ದು ತಲಾ 5 ಸಾವಿರ ರೂ. ನಗದು ನೀಡಲಾಗುವುದು.

Write A Comment