ಕರ್ನಾಟಕ

ಕಟೌಟ್​ಗೆ ಕ್ಷೀರಾಭಿಷೇಕ ರಜನಿಗೆ ನೋಟಿಸ್!

Pinterest LinkedIn Tumblr

rajaniಬೆಂಗಳೂರು: ಸೂಪರ್​ಸ್ಟಾರ್ ರಜನಿಕಾಂತ್​ರ ಹೊಸ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಅವರ ಕಟೌಟ್​ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡುವ ಪದ್ಧತಿ ನಿಷೇಧಿಸಬೇಕೆಂಬ ಮನವಿ ಒಳಗೊಂಡ ಅರ್ಜಿ ಬುಧವಾರ ಮೇಯೋಹಾಲ್ ಕೋರ್ಟ್ ಮೆಟ್ಟಿಲೇರಿದೆ.

ದೇಶದಲ್ಲಿ ಸಾವಿರಾರು ಮಕ್ಕಳು ಅಪೌಷ್ಟಿಕತೆಯಿಂದ ಕೊನೆಯುಸಿರೆಳೆಯುತ್ತಿದ್ದಾರೆ. ಬಡತನದ ಬೇಗೆಯಲ್ಲಿ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ರಜನಿಕಾಂತ್ ಅಭಿಮಾನಿಗಳು ಸಾವಿರಾರು ಲೀಟರ್ ಹಾಲನ್ನು ಕಟೌಟ್​ಗೆಅಭಿಷೇಕ ಮಾಡಿ ವ್ಯರ್ಥ ಮಾಡುತ್ತಿತ್ದಾರೆ. ಆದ್ದರಿಂದ ಕಟೌಟ್​ಗೆ ಹಾಲಿನ ಅಭಿಷೇಕ ಮಾಡುವುದನ್ನು ನಿಷೇಧಿಸುವಂತೆ ಮನವಿ ಮಾಡಿ ಮಣಿವಣ್ಣನ್ ಎಂಬುವರು ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ ನ್ಯಾಯಾಲಯ, ಪ್ರಕರಣದ ಬಗ್ಗೆ ರಜನಿಕಾಂತ್ ಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಏ. 11ಕ್ಕೆ ಮುಂದೂಡಿದೆ.

ಲಿಂಗಾ ಸಿನಿಮಾದ ನಂತರದಲ್ಲಿ ರಜನಿಕಾಂತ್ ಒಂದಲ್ಲ ಒಂದು ಕಾನೂನು ಸಮಸ್ಯೆಯನ್ನು ಎದುರಿಸುತ್ತಿದ್ದು, ನಷ್ಟ ತುಂಬಿಕೊಡುವಂತೆ ವಿತರಕರು ಕೋರ್ಟ್ ಮೊರೆ ಹೋಗಿದ್ದರು. ಅಲ್ಲದೆ ಕೃತಿಚೌರ್ಯ ಪ್ರಕರಣವನ್ನೂ ರಜನಿಕಾಂತ್ ವಿರುದ್ಧ ಇಬ್ಬರು ದಾಖಲಿಸಿದ್ದರು. ಈಗ ಇನ್ನೊಂದು ಪ್ರಕರಣವನ್ನು ರಜನಿಕಾಂತ್ ಎದುರಿಸಬೇಕಾಗಿದೆ.

Write A Comment