ರಾಯಚೂರು: 4 ಲಕ್ಷಕ್ಕೂ ಅಧಿಕ ಹಣವಿದ್ದ ಎಟಿಎಂ ಯಂತ್ರವನ್ನೇ ಕಳ್ಳರು ಹೊತ್ತೊಯ್ದಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಗ್ರಾಮದಲ್ಲಿ ಅಳವಡಿಸಿದ್ದ ಪ್ರಗತಿ ಗ್ರಾಮೀಣ ಬ್ಯಾಂಕಿನ ಎಟಿಎಂ ಯಂತ್ರವನ್ನು ಕಳ್ಳರು ಕಳೆದ ರಾತ್ರಿ ಹೊತ್ತೂಯ್ದಿದ್ದಾರೆಂದು ತಿಳಿದುಬಂದಿದ್ದು, ಅದರಲ್ಲಿ 4 ಲಕ್ಷಕ್ಕಿಂತ ಹೆಚ್ಚು ಹಣ ಇತ್ತು ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ ಸಿಂಗ್ ರಾಠೊಡ ಭೇಟಿ ನೀಡಿ, ಕಳ್ಳರ ಪತ್ತೆಗಾಗಿ ತಂಡ ರಚಿಸುವುದಾಗಿ ತಿಳಿಸಿದ್ದಾರೆ. ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-ಉದಯವಾಣಿ