ಕರ್ನಾಟಕ

ಪತಿಯ ಜಿಪುಣತನ ದಾಂಪತ್ಯದಲ್ಲಿ ವಿರಸ

Pinterest LinkedIn Tumblr

hus-715x400ಬೆಂಗಳೂರು,ಮಾ.೩೦-ಸಾಫ್ಟ್‌ವೇರ್ ಉದ್ಯೋಗಿಯೊಬ್ಬರ ಅತಿಯಾದ ಜಿಗುಣತನ ದಾಂಪತ್ಯದ ವಿರಸಕ್ಕೆ ಕಾರಣವಾಗಿದೆ.!
ಜಿಪುಣ ಗಂಡನ ಜತೆ ಬಾಳುವುದು ಕಷ್ಟ ಎಂದು ಪತ್ನಿ ಹೇಳುತ್ತಿದ್ದರೆ, ನಾನು ಇರೋದು ಹೀಗೆ ಮುಂದಿನ ಜೀವನಕ್ಕಾಗಿ ಮಕ್ಕಳಿಗಾಗಿ ಉಳಿಸಬೇಕಲ್ಲವೇ ಎಂದು ಪತಿ ಹೇಳುತ್ತಿದ್ದಾನೆ.
ಇನ್ಫೋಸಿಸ್ ನಲ್ಲಿ ಕೆಲಸ ಮಾಡುತ್ತಿರುವ ನವೀನ್ ಎಂಬುವರ ದಾಂಪತ್ಯದ ವಿರಸ ಅವಾಂತರಕ್ಕೆ ಅತಿಯಾದ ಜಿಪುಣತನವೇ ಕಾರಣವಾಗಿದೆ ಅವರ ದೂರಿನ ಮೇರೆಗೆ ವನಿತಾ ಸಹಾಯವಾಣಿ ನಡೆಸಿದ ವಿಚಾರಣೆಯಲ್ಲಿ ಹಲವು ಅಚ್ಚರಿಯ ಜಿಪುಣತನದ ಅಂಶಗಳು ಹೊರಬಿದ್ದವೆ.
ತನ್ನ ಗಂಡನ ಬಳಿ ಇರೋದು ಕೇವಲ ಎರಡು ಜೀನ್ಸ್ ಮತ್ತು ಎರಡು ಟೀ ಶರ್ಟ್. ಅವುಗಳನ್ನು ತೊಳೆಯೋದು ತಿಂಗಳಿಗೊಮ್ಮೆ. ಇದರ ಜತೆಗೆ ಮೂರು ಜತೆ ಒಳಉಡುಪು. ಆದರೆ ಅವರೇನೂ ಬಡವರಲ್ಲ, ತಿಂಗಳಿಗೆ ಗಂಡನಿಗೆ ಬರೋ ವೇತನವೇ ೨೦ ಲಕ್ಷ ರೂಪಾಯಿ.
ಆಕೆಯ ಬಳಿ ಇರುವುದು ಎರಡೇ ಎರಡು ಕುರ್ತಾ. ಹೊಸದು ತೆಗೆದುಕೊಳ್ಳಬೇಕು ಅಂದ್ರೆ ವರ್ಷ ಕಾಯಬೇಕು. ದಿನಕ್ಕೆ ಒಂದೇ ಒಂದು ಗಂಟೆ ಟೀವಿ ನೋಡಬೇಕು ಊಟಕ್ಕೆ ಒಂದು ಪಾವು ಅಕ್ಕಿ. ಅದನ್ನೇ ಸರಿಮಾಡಿಕೊಂಡು ಊಟ ಮಾಡಬೇಕು. ಹೊಟ್ಟೆ ತುಂಬ ಊಟ ಮಾಡಿ ವರ್ಷಗಳೇ ಕಳೆದಿವೆ ಎನ್ನುತ್ತಾರೆ ಪತ್ನಿ.
ವಿಶೇಷವೆಂದರೆ, ನವೀನ್‌ಗೆ ಸ್ವಂತ ಎಂದೇ ಎರಡು ಮನೆ, ಎರಡು ಫ್ಲ್ಯಾಟ್ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಅಂತ ೨ ಲಕ್ಷ ರೂಪಾಯಿ ಇದೆ. ಇಷ್ಟೆಲ್ಲಾ ಇದ್ರೂ ಖರ್ಚು ಮಾಡಲು ಒಪ್ಪದ ಅಸಾಮಿ, ಜಿಪುಣತನದಲ್ಲೇ ಜೀವನ ಸಾಗಿಸುತ್ತಿದ್ದಾನೆ.
ಪತ್ನಿ ಪ್ರಕಾರ, ಮದುವೆಯಾದ ಈ ಮೂರು ವರ್ಷದಲ್ಲಿ ಖುಷಿ ಅಂತ ಸಿಕ್ಕಿದ್ದು ಮಗುವಾದಾಗ. ಅದಕ್ಕೀಗ ೧೫ ತಿಂಗಳು. ಇದನ್ನು ಬಿಟ್ಟರೆ ಮನೆಯಲ್ಲಿ ಸಂತಸವೆಂಬುದೇ ಸಿಕ್ಕಿಲ್ಲ ಎಂದು ಹೇಳುತ್ತಾಳೆ.
ಅಂದ ಹಾಗೆ ಇವರಿಬ್ಬರದ್ದೂ ಮಧ್ಯಮವರ್ಗದ ಕುಟುಂಬ ಹೀಗಾಗಿ ಮನೆಯಲ್ಲಿ ಕಷ್ಟ ಇದ್ದೇ ಇತ್ತು. ಹಣದ ವಿಚಾರದಲ್ಲಿ ನವೀನ್ ತೀರಾ ಕಷ್ಟ ಅನುಭವಿಸಿದ್ದೂ ಇದೆ. ಕೆಲಸ ಸಿಕ್ಕಿದ ಮೇಲೆ ನವೀನ್‌ಗೆ ಒಂದಷ್ಟು ನೆಮ್ಮದಿ ಸಿಕ್ಕಿದೆ. ಹೀಗಾಗಿ ದುಡಿಯುತ್ತಿದ್ದೇನೆ ಎಂದು ಹೇಗೇಗೋ ಖರ್ಚು ಮಾಡಬಾರದು ಎಂಬುದು ನವೀನ್ ಪಾಲಿಸಿ. ಹೀಗಾಗಿ ಈ ರೀತಿಯ ಸಂಸಾರ. ಆದರೆ ಪತ್ನಿ ವಿಚಾರದಲ್ಲಿ ಇದು ಒಂದು ಜೀವನವೇ. ಆದರೆ ನವೀನ್ ಹೇಳೋದು, ಈಗ ನಾವು ಉಳಿಸುತ್ತಿರುವುದು ಮಕ್ಕಳಿಗಾಗಿ. ಅವರು ಖುಷಿಯಲ್ಲಿ ಇರಬೇಕಾದರೆ, ಹಣ ಕೊಡಿಡಬೇಕು, ಆಸ್ತಿ ಮಾಡಿಡಬೇಕು.
ಈಗಾಗಲೇ ವನಿತಾ ಸಹಾಯವಾಣಿಯವರು ಇಬ್ಬರನ್ನೂ ಕರೆಸಿ ಮಾತನಾಡಿಸಿದ್ದಾರೆ. ಆದರೆ ನವೀನ್ ಬದಲಾಗಲ್ಲ ಎಂದು ಹೇಳುತ್ತಿದ್ದಾರೆ. ತಜ್ಞರ ಪ್ರಕಾರ, ನವೀನ್‌ಗೆ ಚಿಕಿತ್ಸೆ ಅಗತ್ಯವಿದೆ. ಕಷ್ಟದಲ್ಲಿ ಬೆಳೆದಿರುವುದರಿಂದ ಈ ರೀತಿಯ ಜೀವನಕ್ಕೆ ಮೊರೆ ಹೋಗಿದ್ದಾರೆ ಎಂದು ಹೇಳುತ್ತಾರೆ.

Write A Comment