ಕರ್ನಾಟಕ

ಗೃಹ ರಕ್ಷಕರ ‘ಗೃಹ’ ಸಂಕಷ್ಟದಲ್ಲಿ

Pinterest LinkedIn Tumblr

ಗರ಻ಹ಻ಚಿಂಚೋಳಿ: ಪಟ್ಟಣದಲ್ಲಿರುವ ಕರ್ನಾಟಕ ರಾಜ್ಯ ಗೃಹ ರಕ್ಷಕ ದಳ ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದ್ದಿಗೆ ಆರು ತಿಂಗಳಿಂದ ಸರಕಾರವು ಗೌರವ ಧನ ನೀಡಿಲ್ಲ. ಸರಕಾರ ಈ ರೀತಿ ವಿಳಂಬ ನೀತಿ ಅನುಸರಿಸುತ್ತಿರುವದರಿಂದ ದುಡಿಯುವ ಸಿಬ್ಬಂದ್ದಿ ಕುಟುಂಬಗಳು ಸಂಕಷ್ಟ ಎದುರಿಸುವಂತಾಗಿದೆ ಎಂದು ಗೃಹ ರಕ್ಷಕ ದಳ ಸಿಬ್ಬಂದ್ದಿ ಪ್ರತಿಭಟನೆ ನಡೆಸಿದ್ದಾರೆ.

ತಾಲೂಕಿನಲ್ಲಿ 51 ಸಿಬ್ಬಂದ್ದಿ ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ 29 ಸಿಬ್ಬಂದಿಗಳು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ. ಆರು ಸಿಬ್ಬಂದ್ದಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವ್ಯಾಪ್ತಿಯಲ್ಲಿ ಹಾಗೂ 5 ಜನ ಸಿಬ್ಬಂದ್ದಿ ಅಗ್ನಿಶಾಮಕ ಠಾಣೆ ವ್ಯಾಪ್ತಿಯಲ್ಲಿ ಪ್ರತಿದಿನ ಸೇವೆ ಸಲ್ಲಿಸುತ್ತಿದ್ದಾರೆ. ಅದರೆ ಅಗಸ್ಟ್ ತಿಂಗಳಿಂದ ಜನವರಿಯವರೆಗೂ ಗೌರವ ಧನ ನೀಡದೆ ಇರುವದರಿಂದ ಕುಟುಂಬ ನಿರ್ವಹಣೆ ದುಸ್ಥರವಾಗಿದೆ.

ಪ್ರತಿ ದಿನಕ್ಕೆ ಹಿಂದೆ 250 ರು. ನೀಡಲಾಗುತ್ತಿತ್ತು ಇದೀಗ ಜೂನ್ 15 ರಿಂದ ಪ್ರತಿ ದಿನ 325 ರು. ಗೌರವ ಧನ ಹೆಚ್ಚಿಸಿ ಸರಕಾರ ಆದೇಶ ಹೊರಡಿಸಿದೆ. ಇದುವರೆಗೆ ಒಂದು ಪೈಸೆ ಗೌರವ ಧನ ದೊರೆತ್ತಿಲ್ಲ ಎಂದು ಸಿಬ್ಬಂದ್ದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Write A Comment